ಅಭಿಪ್ರಾಯ / ಸಲಹೆಗಳು

2023-24 ರ ಕಾರ್ಯಕ್ರಮಗಳು

1. ಅಬ್ಬಕ್ಕ ಉತ್ಸವ - 2024 - ಕೊಂಕಣಿ ಸಾಂಸ್ಕೃತಿಕ ಕಾರ್ಯಕ್ರಮ   

ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ(ರಿ), ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಹಾಗೂ ಇತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ದಿನಾಂಕ 24.02.2024 ರಂದು ಉಳ್ಳಾಳದ ಮಹಾತ್ಮಾಗಾಂಧಿ ರಂಗಮಂದಿರದಲ್ಲಿ  "ಅಬ್ಬಕ್ಕ ಉತ್ಸವ-2024" ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಅಗ್ರಾರ್‌ನ ಗುಮ್ಟಾಂ ಕಲಾ ಪಂಗಡದ ಜಾಸ್ಮಿನ್‌ ಮತ್ತು ಬಳಗದಿಂದ ಗುಮ್ಟಾಂ ಹಾಡು ಮತ್ತು ನೃತ್ಯ ಕಾರ್ಯಕ್ರಮ ಹಾಗೂ ಕು. ಗ್ರೀ಼ಷ್ಮಾ ಕಿಣಿ ಮಂಗಳೂರು ಇವರಿಂದ ಕೊಂಕಣಿ ಸುಗಮ ಸಂಗೀತ ಕಾರ್ಯಕ್ರಮ ಪ್ರಸ್ತುತ ಪಡಿಸಲಾಯಿತು. 

 

Photo :  ವೀಕ್ಷಿಸಿ

 2. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ -2024 (ಅಂತರಾಷ್ಟ್ರೀಯ್‌ ಸ್ತ್ರೀಯಾಂಚೊ ದಿವಸ್‌ - 2024 )

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಕೊಂಕಣಿ ಸಂಸ್ಥೆ, ಸಂತ ಅಲೋಶಿಯಸ್ ಪರಿಣಿತ ವಿಶ್ವವಿದ್ಯಾನಿಲಯ ಹಾಗೂ ಕೊಂಕಣಿ ಲೇಖಕಿಯರ ಸಂಘ (ಕೊಂಕ್ಣಿ ಲೇಖಕಿಂಚೊ ಎಕ್ತಾರ್)‌ ಇವರ ಸಹಯೋಗದಲ್ಲಿ ಮಾರ್ಚ್‌ 8 ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ದಿನಾಂಕ 01.03.2024 ರಂದು ಸಂತ ಅಲೋಶಿಯಸ್‌ ಕಾಲೇಜಿನ ಸಹೋದಯ ಸಭಾಂಗಣದಲ್ಲಿ ಮಹಿಳಾ ದಿನಾಚರಣೆ 2024 ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮದ ಗೌರವ ಅಧ್ಯಕ್ಷತೆಯನ್ನು ವಹಿಸಿದ ರೆ| ಫಾ ಮೆಲ್ವಿನ್‌ ಜೆ ಪಿಂಟೊ, ಎಸ್.ಜೆ ಕೊಂಕಣಿಗರ ಜಾನಪದ ವಾದ್ಯಪರಿಕರ ಗುಮಟೆಯನ್ನು ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅವರು ಮಾತನಾಡಿ ಇಂದು ಮಹಿಳಾ ದಿನ, ಈ ದಿನ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು, ಮಹಿಳೆಯರ ಮೇಲಿನ ಶೋಷಣೆ, ದಬ್ಬಾಳಿಕೆಗೆ ಅಂತ್ಯ ಹಾಡಬೇಕು. ಪುರುಷರು ಮನಸ್ಸಿನಿಂದ ತಮ್ಮ ಬಾವನೆಗಳನ್ನು ವ್ಯಕ್ತಪಡಿಸಿದರೆ ಮಹಿಳೆಯರು ತಮ್ಮ ಹೃದಯದಿಂದ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ ಎಂದರು. ಶ್ರೀಮತಿ ಸಲೋಮಿ ಮೊಗರ್ನಾಡ್‌ ಇವರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಶ್ರೀಮತಿ ಚಂದ್ರಿಕಾ ಮಲ್ಯ, ಶ್ರೀಮತಿ ಕೃತಿಕಾ ಕಾಮತ್‌, ಶ್ರೀಮತಿ ಪ್ಲಾವಿಯಾ ಅಲ್ಬುಕರ್ಕ್, ಶ್ರೀಮತಿ ಜೋಯ್ಸ್‌ ಪಿಂಟೊ ಕಿನ್ನಿಗೋಳಿ ಹಾಗೂ ಶ್ರೀಮತಿ ಮರ್ಲಿನ್‌ ಮೇಬಲ್‌ ಮಸ್ಕರೇನಸ್‌ ಮಹಿಳಾ ಸಬಲೀಕರಣ, ಮಹಿಳೆಯರ ಸವಾಲು, ಸಶಕ್ತ ಮಹಿಳೆ ಶೀರ್ಷಿಕೆಯಡಿ ತಮ್ಮ ಕವನಗಳನ್ನು ಪ್ರಸ್ತುತ ಪಡಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶ್ರೀಮತಿ ಶೋಭಾ ಶೆಣೈ ಶುಭ ಹಾರೈಸಿದರು. ಆರೋಗ್ಯಕರ  ಸಮಾಜದ ರಚನೆಯಲ್ಲಿ ಪ್ರಸ್ತುತ ಸ್ಥಿತಿಗತಿಯಲ್ಲಿ ಮಹಿಳೆಯರ ಪಾತ್ರ"(ಭಲಾಯ್ಕೆ ಭರಿತ್‌ ಸಮಾಜಾ ರಚ್ಪಾಂತ್‌ ಆಯ್ಚ್ಯಾ ಪ್ರಸ್ತುತ್‌ ಪರಿಗತೆಂತ್‌ ಸ್ತ್ರೀಯೆಚೊ ಪಾತ್ರ್) ಕುರಿತು  ವಿಚಾರ ಮಂಡಿಸಿದ ಹೋಮಿಯೋಪತಿ ತಜ್ಞೆ ಸಿ.ಡಾ ಮೇಬಲ್‌ ಕ್ಲಾರ ಡಿಮೆಲ್ಲೊ ಮಾತನಾಡಿ ಆಧುನಿಕತೆ, ತಂತ್ರಜ್ಞಾನದ ಪ್ರಸ್ತುತ ಸಮಾಜದಲ್ಲಿ ಆಧುನಿಕತೆಯ ವ್ಯಾಮೋಹಕ್ಕೊಳಗಾಗಿ ನಮ್ಮ ನೈಸರ್ಗಿಕ ಬದುಕು ಯಾಂತ್ರೀಕೃತಗೊಳ್ಳುತ್ತಿರುವ ಸೂಕ್ಷ್ಮತೆಯನ್ನು ವಿವರಿಸಿದರು. ನಮ್ಮ ಪಾರಂಪರಿಕ ಆಹಾರ ಪದ್ದತಿ, ಆಚರಣೆಗಳು, ಜೀವನ ಪದ್ದತಿ ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ನೀಡುತ್ತಿದ್ದ ಕೊಡುಗೆ, ಪ್ರಸ್ತುತ ಜೀವನ ಶೈಲಿಯು ಒಡ್ಡುವ ಸವಾಲುಗಳ ಬಗ್ಗೆ ಗಮನ ಸೆಳೆದರು. ‍ಶ್ರೀಮತಿ ಐರಿನ್‌ ರೆಬೆಲ್ಲೊ ಮತ್ತು ತಂಡದವರು ಕೊಂಕಣಿ ಗೀತ ಗಾಯನ ಪ್ರದರ್ಶನಗೊಂಡಿತು. ಕೊಂಕಣಿ ಲೇಖಕರ ಸಂಘದ ಆಡ್ಮಿನ್‌ ಶೀಮತಿ ಪ್ಲಾವಿಯಾ ಅಲ್ಬುಕರ್ಕ್‌ ಸ್ವಾಗತಿಸಿದರು, ಕೊಂಕಣಿ ಸಂಘದ ‍ಶ್ರೀಮತಿ ಪ್ಲೋರಾ ಕ್ಯಾಸ್ತಲಿನೊ ವಂದಿಸಿ, ಶ್ರೀಮತಿ ಪೆಲ್ಸಿಲೋಬೊ ಕಾರ್ಯಕ್ರಮ ನಿರೂಪಿಸಿದರು.

ಇತ್ತೀಚಿನ ನವೀಕರಣ​ : 02-03-2024 02:24 PM ಅನುಮೋದಕರು: Karnataka Konkani Sahitya Academy



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080