ಅಭಿಪ್ರಾಯ / ಸಲಹೆಗಳು

2021-22 ರ ಕಾರ್ಯಕ್ರಮಗಳು

 

1. ಯೆಯಾ ಹಾಸೊಂವ್ಯಾ- 2 - ಪ್ರಥಮ ಆವೃತ್ತಿ

ಯೆಯಾ ಹಾಸೊಂವ್ಯಾ - 2 ಕಾರ್ಯಕ್ರಮದ ಪ್ರಥಮ ಆವೃತ್ತಿಯು ದಿನಾಂಕ 11.04.2021 ರಂದು ಮಂಗಳೂರಿನ ಪುರಭವನದಲ್ಲಿ ನಡೆಯಿತು. 12 ಕಲಾತಂಡಗಳು ಈ ಆವೃತ್ತಿಯಲ್ಲಿ ತಮ್ಮ ಕಲಾಪ್ರದರ್ಶನವನ್ನು ನೀಡಿದರು. ಕಲಾವಿದರಾದ ಶ್ರೀ ಓಂ ಗಣೇಶ್‌, ಶ್ರೀ ಅವಿತಾಸ್‌ ಎಡೋಲ್ಪಾಸ್‌ ಕುಟನ್ಹಾ ತೀರ್ಪುಗಾರರಾಗಿ ಹಾಗೂ ಶ್ರೀ ಕಾಸರಗೋಡು ಚಿನ್ನಾರವರು ಮಹಾಗುರುಗಳಾಗಿ ಭಾಗವಹಿಸಿದ್ದರು.

 

2. ಗೌರವ ಪ್ರಶಸ್ತಿ ಹಾಗೂ ಪುಸ್ತಕ ಪುರಸ್ಕಾರ 2020

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ 2020 ನೇ ಸಾಲಿನ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಪುರಸ್ಕಾರ ಪ್ರಧಾನ ಸಮಾರಂಭವವು ದಿನಾಂಕ 01.08.2021 ರಂದು ಮಂಗಳೂರಿನ ಪುರಭವನದಲ್ಲಿ ನಡೆಯಿತು. ಕೊರೊನಾ ಮಾರ್ಗಸೂಚಿ ಅನುಸರಿಸಿ ಸರಳವಾಗಿ ಕಾರ್ಯಕ್ರಮ ಆಯೋಜಿಸಲಾಗಿದ್ದು ಪ್ರಶಸ್ತಿ ಪುರಸ್ಕೃತರು ಮತ್ತು ಗಣ್ಯರು ಮಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶ್ರೀ ಅರುಣ ಸುಭ್ರಾವ್‌ ಉಭಯಕರ್(ಸಾಹಿತ್ಯ), ಶ್ರೀ ಪುತ್ತೂರು ಪಾಂಡುರಂಗ ನಾಯಕ್ (ಕಲೆ), ಶ್ರೀಮತಿ ಲಕ್ಷ್ಮೀ ಕೃಷ್ಣ ಸಿದ್ದಿ (ಜಾನಪದ) ಇವರಿಗೆ 2020 ರ ಗೌರವ ಪ್ರಶಸ್ತಿ ನೀಡಿ ಗೌರವಿಸಲಾಯಿತು, ಹಾಗೂ ಶ್ರೀ ಪ್ರೇಮ್‌ ಮೊರಾಸ್‌ರವರ "ಏಕ್‌ ಮೂಟ್‌ ಪಾವ್ಳ್ಯೋ" ಕವನ ಸಂಗ್ರಹ, ಶ್ರೀಮತಿ ಮೋನಿಕಾ ಡೇಸಾ ಇವರ "ನವಿ ದಿಶಾ" ಸಣ್ಣಕತೆ, ಶ್ರೀ ಸ್ಟೀವನ್‌ ಕ್ವಾಡ್ರಸ್‌ ಇವರ "ಸುಗಂಧು ಸ್ವಾಸ್"‌ ಲೇಖನಾ ಪುಸ್ತಕಕ್ಕೆ ಬಹುಮಾನ ನೀಡಿ ಗೌರವಿಸಲಾಯಿತು. ಮಾನ್ಯ ಶಾಸಕರಾದ ಶ್ರೀ ಡಿ ವೇದವ್ಯಾಸ್‌ ಕಾಮತ್‌ ಮಾತನಾಡಿ ಕೊಂಕಣಿ ಭವನಕ್ಕೆ ಈಗಾಗಲೇ 3 ಕೋಟಿ ರೂ ಬಿಡುಗಡೆಯಾಗಿದೆ. ಕೊಂಕಣಿ ಭವನ ನಿರ್ಮಾಣಕ್ಕಾಗಿ ಊರ್ವಾಸ್ಟೋರ್‌ನಲ್ಲಿ 37 ಸೆಂಟ್ಸ್ ನಿವೇಶನ ಮಂಜೂರಾಗಿದೆ. ಸದ್ಯದಲ್ಲೆ ಕಾಮಗಾರಿ ಆರಂಭಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ವಿಧಾನ ಪರಿಷತ್‌ ಸದಸ್ಯರಾದ ಶ್ರೀ ಪ್ರತಾಪ್‌ ಸಿಂಹ ನಾಯಕ್‌, ಮೇಯರ್‌ ಪ್ರೇಮಾನಂದ ಶೆಟ್ಟಿ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಶ್ರೀ ದಯಾನಂದ ಜಿ ಕತ್ತಲ್‌ಸಾರ್‌, ಬ್ಯಾರಿ ಅಕಾಡೆಮಿ ಅಧ್ಯಕ್ಷರಾದ ಶ್ರೀ ರಹೀಂ ಉಚ್ಚಿಲ್‌, ಕೊಂಕಣಿ ಚಲನಚಿತ್ರ ನಿರ್ಮಾಪಕ ಶ್ರೀ ಹೆನ್ರಿ ಡಿಸಿಲ್ವ ಹಾಗೂ ಅಕಾಡೆಮಿ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅಕಾಡೆಮಿ ಅಧ್ಯಕ್ಷರಾದ ಡಾ ಕೆ ಜಗದೀಶ್‌ ಪೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಕಾಡೆಮಿ ಸದಸ್ಯ ಶ್ರೀ ಅರುಣ್‌ ಜಿ ಶೇಟ್‌ ಸ್ವಾಗತಿಸಿ, ರಿಜಿಸ್ಟ್ರಾರ್‌ ಮನೋಹರ್‌ ಕಾಮತ್‌ ವಂದಿಸಿದರು. ಸದಸ್ಯರಾದ ಕನ್ಯೂಟ್‌ ಜೀವನ್‌ ಪಿಂಟೊ ಕಾರ್ಯಕ್ರಮ ನಿರ್ವಹಿಸಿದರು.

 

3. ಯೆಯಾ ಹಾಸೊಂವ್ಯಾ -2 - ದ್ವಿತೀಯ ಆವೃತ್ತಿ

ಯೆಯಾ ಹಾಸೊಂವ್ಯಾ - 2 ಕಾರ್ಯಕ್ರಮದ ದ್ವಿತೀಯ ಆವೃತ್ತಿಯು ದಿನಾಂಕ 11.04.2021 ರಂದು ಮಂಗಳೂರಿನ ಪುರಭವನದಲ್ಲಿ ನಡೆಯಿತು. 7 ಕಲಾತಂಡಗಳು ಈ ಆವೃತ್ತಿಯಲ್ಲಿ ತಮ್ಮ ಕಲಾಪ್ರದರ್ಶನವನ್ನು ನೀಡಿದರು. ಕಲಾವಿದರಾದ ಶ್ರೀಮತಿ ಸಂಧ್ಯ ಶೆಣೈ, ಲೇಖಕಿ ಶ್ರೀಮತಿ ಕ್ಯಾಥರಿನ್‌ ರೋಡ್ರಿಗಸ್‌ ತೀರ್ಪುಗಾರರಾಗಿ ಹಾಗೂ ಶ್ರೀ ಕಾಸರಗೋಡು ಚಿನ್ನಾರವರು ಮಹಾಗುರುಗಳಾಗಿ ಭಾಗವಹಿಸಿದ್ದರು.

 

4. ಕೊಂಕಣಿ ರಾಷ್ಟ್ರೀಯ ಮಾನ್ಯತಾ ದಿವಸ-2021-(1) ಹುಬ್ಬಳ್ಳಿ

ಕೊಂಕಣಿ ಭಾಷೆಗೆ ಸಾಂವಿಧಾನಿಕ ಮಾನ್ಯತೆ ದೊರೆತ ಸವಿ ನೆನಪಿಗಾಗಿ ಆಗಸ್ಟ್‌ 20 ನ್ನು ಕೊಂಕಣಿ ಮಾನ್ಯತಾ ದಿನವನ್ನಾಗಿ ಆಚರಿಸಲಾಗುತ್ತಿದೆ. ದಿನಾಂಕ 20.08.2021 ರಂದು ಅಕಾಡೆಮಿ ಸದಸ್ಯರಾದ ಶ್ರೀ ಸುರೇಂದ್ರ ವಿ ಪಾಲನಕರ್‌ ಇವರ ಸದಸ್ಯ ಸಂಚಾಲಕತ್ವದಲ್ಲಿ ಹುಬ್ಬಳ್ಳಿಯ ಮಾತೆ ಶ್ರೀ ಹುಲಿಗೇಮ್ಮ ದೇವಿ ದೇವಸ್ಥಾನ ಸಭಾ ಗೃಹದಲ್ಲಿ ಕೊಂಕಣಿ ರಾಷ್ಟ್ರೀಯ ಮಾನ್ಯತಾ ದಿವಸ-2021 ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಡಾ ಉದಯ ರಾಯಕರ್‌ ಮಾತನಾಡಿ ಕೊಂಕಣಿ ಭಾಷೆ ಬಾಂದವ್ಯ ಬೆಸೆಯುವ ಕಲೆಯನ್ನು ಹೊಂದಿರುವ ಭಾಷೆಯಾಗಿದ್ದು, ಕೊಂಕಣಿ ಅಕಾಡೆಮಿಯು ಸಮಸ್ತ ಕೊಂಕಣಿ ಭಾಂದವರಿಗೆ ಕೊಂಕಣಿ ಭಾಷಾಭಿವೃದ್ದಿಗಾಗಿ ಅವಕಾಶಗಳನ್ನು ಕಲ್ಪಿಸುತ್ತಿದೆ ಎಂದರು. ಸಂತೋಷ ಗಜಾನನ ಮಹಾಲೆ ಕೊಂಕಣಿ ನಮ್ಮ ಮೂಲಭಾಷೆ, ಕೊಂಕಣಿ ಭಾಷಿಕರು ಮನೆಯಲ್ಲಿರುವ ಮಕ್ಕಳಿಗೆ ಕೊಂಕಣಿ ಬಗ್ಗೆ ಅಭಿರುಚಿ ಬೆಳಿಸಿದಾಗ ಮಾತ್ರ ಕೊಂಕಣಿ ಭಾಷೆ ಬೆಳೆಯಲು ಸಾಧ್ಯ ಎಂದು ತಮ್ಮ ಉಪನ್ಯಾಸದಲ್ಲಿ ಕೊಂಕಣಿ ಭಾಷೆಯ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಕೊಂಕಣ ಸಮಾಜದ ಅಧ್ಯಕ್ಷ ಅಶೋಕ್‌ ರಾಣೆ, ಕರ್ನಾಟಕ ವಿಶ್ವವಿದ್ಯಾನಿಲಯದ ಸಿಂಡಿಕೇಟ್‌ ಸದಸ್ಯ ಪ್ರಕಾಶ ರಾಯಕರ್‌ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕು. ಸುಧಾಶ್ರೀ ಮತ್ತು ಪಂಗಡದಿಂದ ಕೊಂಕಣಿ ಗೀತ ಗಾಯನ ಹಾಗೂ ಕು.ಸಂಗೀತಾ ಮತ್ತು ಪಂಗಡದಿಂದ ಇಂದ್ರಜಾಲ ಪ್ರದರ್ಶನ ನಡೆಯಿತು.

 

5. ಕೊಂಕಣಿ ರಾಷ್ಟ್ರ ಮಾನ್ಯತಾಯ ದೀಸ – 2021-(2) ಕಾರವಾರ

ಕಾರವಾರ ನಗರದ ಜೆನೆಟಿಕ್‌ ಸ್ಮಾರ್ಟ್‌ ಸೊಲ್ಯೂಶನ್ಸ್‌ ಪ್ರೈ.ಲಿ ಸಭಾಭವನದಲ್ಲಿ ದಿನಾಂಕ 20.08.2021 ರಂದು ಕೊಂಕಣಿ ಮಾನ್ಯತಾ ದಿನಾಚಣೆಯನ್ನು ಆಚರಿಸಲಾಯಿತು. ಅಕಾಡೆಮಿಯ ಸದಸ್ಯರಾದ ಡಾ ವಸಂತ ಬಾಂದೇಕರ್‌ರವರ ಸಂಚಾಲಕತ್ವದಲ್ಲಿ ಈ ಕಾರ್ಯಕ್ರಮ ನಡೆಸಲಾಯಿತು. ಡಾ ವಸಂತ ಬಾಂದೇಕರ್‌ ಸ್ವಾಗತಿಸಿದರು. ಪತ್ರಿಕಾ ಸಂಪಾದಕ ಶ್ರೀ ಮಾರುತಿ ಕಾಮತ್‌ ಕಾರ್ಯಕ್ರಮವನ್ನು ಉದ್ಘಾಟಿಸಿ ಕೊಂಕಣಿಯ ಭಾಷಾ ಮಹತ್ವವನ್ನು ವಿವರಿಸಿದರು.  ಮುಖ್ಯ ಅತಿಥಿಯಾಗಿ ಆಗಮಿಸಿದ ಜಿ.ಡಿ ಪಾಲೆಕರ್‌ ಬಿಣಗರವರು ಕೊಂಕಣಿ ಭಾಷೆ ಬೆಳೆದು ಬಂದ ಸನ್ನಿವೇಶಗಳನ್ನು ವಿವರಿಸಿದರು. ಸಾಹಿತಿ, ಕಲಾವಿದರಾದ ಶ್ರೀ ನಾಗೇಶ ಅಣ್ವೇಕರ್‌ ಕೊಂಕಣಿ ಕವನಗಳನ್ನು ವಾಚಿಸಿದರು, ಉಪನ್ಯಾಸಕ ಶ್ರೀ ರಾಜೇಶ ಮರಾಠೆ  ಭಾಷೆಯ ಮಹತ್ವವನ್ನು ವಿವರಿಸಿದರು.  ಕಾರ್ಯಕ್ರಮದಲ್ಲಿ ಚಂದನ, ಕೋ-ಆರ್ಡಿನೇಟರ್‌ ಜೆನೆಟಿಕ್‌ ಸೊಲ್ಯೂಷನ್ಸ್‌ ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು. ಶ್ರೀ ಸತೀಶ ವಿ ನಾಯ್ಕರಿಂದ ಲಘು ಮನೋರಂಜನಾ ಕಾರ್ಯಕ್ರಮ ಜರುಗಿತು.

 

6. ಕೊಂಕಣಿ ಮಾನ್ಯತಾ ದಿವಸ್‌ –(3-1) ವಿಶೇಷ ಸಂದರ್ಶನ - ಮಂಗಳೂರು

ಕೊಂಕಣಿ ಅಕಾಡೆಮಿಯ ಮಾಜಿ ಅಧ್ಯಕ್ಷರು, ಸಂಗೀತಗಾರರು ಆಗಿರುವ ಶ್ರೀ ಎರಿಕೆ ಒಝೇರಿಯೊ ಅವರೊಂದಿಗೆ  ಸಂದರ್ಶನವು ಅಕಾಡೆಮಿಯ ಯೂಟ್ಯೂಬ್‌ ಚಾನೆಲ್‌ನಲ್ಲಿ ಪ್ರಸಾರಗೊಂಡಿತು. ಕೊಂಕಣಿ ಭಾಷೆಗೆ ಮಾನ್ಯತೆ ದೊರೆಯಲು ಕೊಂಕಣಿಗರು ಪಟ್ಟ ಶ್ರಮದ ಬಗ್ಗೆ ಸವಿವರ ಮಾಹಿತಿಯನ್ನು ಶ್ರೀಯುತರು ವಿವರಿಸಿದರು. ಅಕಾಡೆಮಿ ಸದಸ್ಯರಾದ ಶ್ರೀ ‍ಗೋಪಾಲ ಕೃಷ್ಣ ಭಟ್‌ ಈ ಸಂದರ್ಶನವನ್ನು ನಡೆಸಿಕೊಟ್ಟರು.

 

7. ಕೊಂಕಣಿ ಮಾನ್ಯತಾ ದಿವಸ್‌- (4 )- ಕುಮಟಾ

ಕೊಂಕಣಿ ಭಾಷೆಗೆ ರಾಷ್ಟ್ರ ಭಾಷಾ ಮಾನ್ಯತೆ ದೊರಕಿದ ದಿನದ ಪ್ರಯುಕ್ತ “ಕೊಂಕಣಿ ಮಾನ್ಯತಾ ದಿನಾಚರಣೆ“ ಕೊಂಕಣಿ ಸಾಹಿತ್ಯ ಅಕಾಡೆಮಿ ಹಾಗೂ ಕೊಂಕಣಿ ಪರಿಷತ್‌ ಕುಮಟಾ ಇವರ ಸಹಯೋಗದಲ್ಲಿ ಕುಮಟಾದ ನಾದ‍ಶ್ರೀ ಕಲಾಕೇಂದ್ರದಲ್ಲಿ ದಿನಾಂಕ 22.08.2021 ರಂದು ಆಚರಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ನಾಟಕಕಾರ, ಕಲಾವಿದ ಶ್ರೀ ವಾಸುದೇವ ಶಾನಭಾಗ ಮಾತನಾಡಿ ಕೊಂಕಣಿ ಭಾಷೆಯು ಅತ್ಯಂತ ಸುಮಧುರ ಭಾಷೆ, ಈ ಭಾಷೆಯಲ್ಲಿ ಸಾಹಿತ್ಯದ ಸೃಷ್ಟಿ ಇನ್ನೂ ಆಗಬೇಕು, ಕೊಂಕಣಿ ಭಾಷೆಯನ್ನು ಹೆಚ್ಚಿನ ಶಾಲೆಗಳಲ್ಲಿ ಬೋಧಿಸುವಂತಾಗಬೇಕು. ಇಂದು ಕೊಂಕಣಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯಬಹುದು. ರಾಷ್ಟ್ರೀಯ ಸ್ಪರ್ದಾತ್ಮಕ ಪರೀಕ್ಷೆ ತೆಗೆದುಕೊಳ್ಳಬಹುದು. ಒಂದು ಕಾಲದಲ್ಲಿ ಪೋರ್ಚುಗೀಸರ ದಬ್ಬಾಳಿಕೆಗೆ ನಲುಗಿದ ಈ ಭಾಷೆ ಇಲ್ಲಿಯ ತನಕವೂ ಊರ್ಜಿತದಲ್ಲಿದ್ದು ರಾಷ್ಟ್ರ ಮಾನ್ಯತೆ ಪಡೆದಿದೆ ಎಂದರು. ಬರಹಗಾರ್ತಿ ಶ್ರೀಮತಿ ವನಿತಾ ಶಿರೀಶ ನಾಯಕ ಇವರ ಚೊಚ್ಚಲ ಕವನ ಸಂಕಲನ "ಪಾರಿಜಾತ"ವನ್ನು ಬಿಡುಗಡೆ ಮಾಡಲಾಯಿತು. ಮಾನ್ಯತಾ ದಿವಸದ ಅಂಗವಾಗಿ ಜರುಗಿದ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕೊಂಕಣಿ ಪರಿಷತ್‌ ಉಪಾದ್ಯಕ್ಷ ಶ್ರೀ ಮುರಳೀಧರ ಪ್ರಭು, ಪ್ರಾಚಾರ್ಯೆ ಶ್ರೀಮತಿ ಪ್ರೀತಿ ಭಂಡಾರ್ಕರ್‌, ಪುರಸಭಾ ಸದಸ್ಯ ಶ್ರೀ ಟೋನಿ ರೊಡ್ರಿಗಸ್‌ ಹಾಗೂ ಪರಿಷದ್‌ ಉಪಾಧ್ಯಕ್ಷ ಶ್ರೀ ಎಂ.ಬಿ ಪೈ ಉಪಸ್ಥಿತರಿದ್ದರು. ಪರಿಷದ್‌ ಸದಸ್ಯರಾದ ಪ್ರೊ ಆನಂದ ನಾಯಕ ಸ್ವಾಗತಿಸಿದರು. ಶ್ರೀಮತಿ ವೈಶಾಲಿ ನಾಯಕ ಹಾಗೂ ಶ್ರೀಮತಿ ಶ್ರದ್ದಾ ನಾಯಕ ಪ್ರಾರ್ಥಿಸಿದರು. ಶ್ರೀ ಅರುಣ ಮಣಕೀಕರ್‌ ಹಾಗೂ ಕಾರ್ಯದರ್ಶಿ ಶ್ರೀಮತಿ ನಿರ್ಮಲಾ ಪ್ರಭು ಕಾರ್ಯಕ್ರಮ ನಿರೂಪಿಸಿದರು. ಪರಿಷದ ಖಜಾಂಚಿ ಶ್ರೀ ಮಾಧವ ಶಾನಭಾಗ ವಂದಿಸಿದರು.

 

8‌. ಕೊಂಕಣಿ ರಾಷ್ಟ್ರೀಯ ಭಾಷಾ ಮಾನ್ಯತಾ ದಿನಾಚರಣೆ-(5)-ದಾವಣಗೆರೆ

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ದಾವಣಗೆರೆಯ ದೈವಜ್ಞ ಕಲ್ಯಾಣ ಮಂಟಪದಲ್ಲಿ 22.08.2021 ರಂದು ರಾಷ್ಟ್ರೀಯ ಕೊಂಕಣಿ ಭಾಷಾ ಮಾನ್ಯತಾ ದಿನಾಚರಣೆಯನ್ನು ಅಕಾಡೆಮಿ ಸದಸ್ಯರಾದ ‍ಶ್ರೀ ಭಾಸ್ಕರ ನಾಯಕ್‌ ಇವರ ಸಂಚಾಲಕತ್ವದಲ್ಲಿ ಆಚರಿಸಲಾಯಿತು. ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಶ್ರೀಮತಿ ಜಸ್ಟಿನ್‌ ಡಿಸೋಜಾ ಮಾತನಾಡಿ 2011 ರ ಜನಗಣತಿ ಪ್ರಕಾರ ದೇಶದಲ್ಲಿ 2.5 ಮಿಲಿಯನ್‌ ಕೊಂಕಣಿ ಭಾಷಿಕರಿದ್ದಾರೆ. ದೇವನಾಗರಿ, ಕನ್ನಡ, ರೋಮಿ ಹಾಗೂ ಮಲಯಾಲಿ ಲಿಪಿಯನ್ನು ಅನುಸರಿಸುತ್ತಿದ್ದಾರೆ. ಕೊಂಕಣಿ ದೇಶದ ಭಾಷೆಗಳ ಪೈಕಿ ಒಂದು ಎಂಬುದು ಹೆಮ್ಮೆಯ ವಿಚಾರವಾಗಿದೆ. ಗೋವಾ, ಮಹಾರಾಷ್ಟ್ರ, ಗುಜರಾತ್‌, ಕೇರಳವಲ್ಲದೆ ಕರ್ನಾಟಕದ ಮಂಗಳೂರು ಕುಂದಾಪುರ, ಕಾರವಾರ ಜಿಲ್ಲೆಗಳಲ್ಲಿ ಈ ಭಾಷೆ ಮಾತನಾಡುವವರಿದ್ದಾರೆ. ಆಯಾ ಪ್ರಾಂತ್ಯಕ್ಕೆ  ತಕ್ಕಂತೆ ಮಾತಿನ ಶೈಲಿ ಮಾರ್ಪಾಡಾಗಿದೆ ಎಂದು ಹೇಳಿದರು. ಗೌಡ ಸಾರಸ್ವತ ಸಮಾಜದ ಅಧ್ಯಕ್ಷ ಶ್ರೀ ಸಾಲಿಗ್ರಮ ಗಣೇಶ್‌ ಶೆಣೈ, ಶ್ರೀಮತಿ ಗೌರಮ್ಮ ನರಹರಿ ಶೇಟ್‌ ಪ್ರತಿಷ್ಠಾನದ ಅಧ್ಯಕ್ಷ ಶ್ರೀ ಡಾ ನಲ್ಲೂರು ಅರುಣಾಚಲ ಶ್ರೀ ಎಸ್, ರೇವಣ್‌ಕರ, ಶ್ರೀಪತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಡಾ ಆರತಿ ಸುಂದರೇಶ್‌ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಬದಲ್ಲಿ  ಶಿರ್ಸಿಯ ಹಿರಿಯ ಸಾಹಿತಿ ಜಯಶ್ರೀ ನಾರಾಯಣ ನಾಯಕ್‌ ಎಕ್ಕಂಬಿ ಅವರನ್ನು ಗೌರವಿಸಲಾಯಿತು.

 

9. ಕೊಂಕಣಿ ಮಾನ್ಯತಾ ದಿವಸ್‌ (3-2) ವಿಶೇಷ ಸಂದರ್ಶನ - ಮಂಗಳೂರು

ಕೊಂಕಣಿ ಅಕಾಡೆಮಿಯ ಮಾಜಿ ಅಧ್ಯಕ್ಷರು, ಖಾರ್ವಿ ಸಮಾಜದ ಹಿರಿಯ ಮುಖಂಡ ಶ್ರೀ ಕೆ ನಾರಾಯಣ ಖಾರ್ವಿ ಅವರೊಂದಿಗೆ ಸಂದರ್ಶನವು ಅಕಾಡೆಮಿಯ ಯೂಟ್ಯೂಬ್‌ ಚಾನೆಲ್‌ನಲ್ಲಿ ಪ್ರಸಾರಗೊಂಡಿತು. ಕೊಂಕಣಿ ಭಾಷೆಗೆ ಮಾನ್ಯತೆ ಪಡೆಯಲು ಸಾಂಸ್ಕೃತಿಕಾತ್ಮಕವಾಗಿ ನಡೆಸಿರುವ ಹೋರಾಟದ ಬಗ್ಗೆ ಮಾಹಿತಿ ಒದಗಿಸಿದರು. ಅಕಾಡೆಮಿ ಸದಸ್ಯರಾದ ‍ಗೋಪಾಲ ಕೃಷ್ಣ ಭಟ್‌, ಈ ಸಂದರ್ಶನವನ್ನು ನಡೆಸಿಕೊಟ್ಟರು.

 

10. ಕೊಂಕಣಿ ಮಾನ್ಯತಾ ದಿವಸ್‌ (3-3) ವಿಶೇಷ ಸಂದರ್ಶನ - ಮಂಗಳೂರು

ಕೊಂಕಣಿ ಅಕಾಡೆಮಿಯ ಮಾಜಿ ಅಧ್ಯಕ್ಷರು, ಜಿ.ಎಸ್.ಬಿ ಸಮಾಜದ ಹಿರಿಯ ಮುಖಂಡ ಶ್ರೀ ಬಸ್ತಿ ವಾಮನ್‌ ಶೆಣೈ ಅವರೊಂದಿಗೆ ಸಂದರ್ಶನವು ಅಕಾಡೆಮಿಯ ಯೂಟ್ಯೂಬ್‌ ಚಾನೆಲ್‌ನಲ್ಲಿ  ಪ್ರಸಾರಗೊಂಡಿತು. ಕೊಂಕಣಿ ಭಾಷೆಗೆ ಮಾನ್ಯತೆ ದೊರೆಯಲು ದೇಶ ವಿದೇಶಗಳಲ್ಲಿ ನೆಲೆಸಿರುವ ಕೊಂಕಣಿಗರನ್ನು ಸಂಘಟಿಸಿ, ಅವರನ್ನು ಒಂದು ಕಡೆ ಕಲೆಹಾಕಿ ನಡೆಸಿರುವ ವಿಶ್ವ ಕೊಂಕಣಿ ಸಮ್ಮೇಳನ ಕಾರ್ಯಕ್ರಮ ನಡೆಸಿ, ಕೊಂಕಣಿ ಜನರ ಒಕ್ಕೂಟವನ್ನು ಸರ್ಕಾರಕ್ಕೆ ಮನದಟ್ಟು ಮಾಡಿರುವ ಪರಿಯನ್ನು ವಿವರಿಸಿದರು. ಅಕಾಡೆಮಿ ಸದಸ್ಯರಾದ ‍ಗೋಪಾಲ ಕೃಷ್ಣ ಭಟ್‌, ಈ ಸಂದರ್ಶನವನ್ನು ನಡೆಸಿಕೊಟ್ಟರು.

 

11. ಕೊಂಕಣಿ ಚೌಕಿ – ಕವಿಗೋಷ್ಠಿ - ಮಂಗಳೂರು

ದಿನಾಂಕ 17.09.2021 ರಂದು ಅಕಾಡೆಮಿ ಯೂಟೂಬ್‌ ಹಾಗೂ ಪೇಸ್‌ಬುಕ್ ಅåಪ್‌ನಲ್ಲಿ ಕೊಂಕಣಿ ಚೌಕಿ ಶೀರ್ಷಿಕೆಯಡಿ ಕವಿಗೋಷ್ಠಿ ಕಾರ್ಯಕ್ರಮ ಪ್ರಸಾರಗೊಂಡಿತು. ಕೊಂಕಣಿ ಚೌಕಿ ಎಂದರೆ ನಾಲ್ಕೈದು ಜನರು ಒಂದೆಡೆ ಸೇರಿ ತಮ್ಮ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುವುದು ಎಂದು ಹೇಳಬಹುದು. ಈ ಒಂದು ವಿಚಾರವನ್ನು ಹಿನ್ನೆಲೆಯಾಗಿಟ್ಟುಕೊಂಡು ಸ್ತ್ರೀ ಸಬಲೀಕರಣದ ವಿಷಯವಾಗಿ ಕೊಂಕಣಿ ಕವಿಗೋಷ್ಠಿಯನ್ನು ಏರ್ಪಡಿಸಲಾಗಿತ್ತು. ಪಿಂಗಾರ ವಾರಪತ್ರಿಕೆಯ ಸಂಪಾದಕರಾದ ಶ್ರೀ ರೇಮಂಡ್‌ ಡಿಕುನಾ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದರು. ಕವಿಗಳಾದ ‍ಶ್ರೀ ಪ್ರಾನ್ಸಿಸ್‌ ಸಲ್ಡಾನ್ಹಾ, ‍ಶ್ರೀಮತಿ ಅಸುಂತಾ ಡಿಸೋಜಾ, ಶ್ರೀಮತಿ ಚಂದ್ರಿಕಾ ಮಲ್ಯ, ಹಾಗೂ ಶ್ರೀಮತಿ ಚೇತನಾ ನಾಯಕ್‌ ರವರು ಸ್ರ್ತೀ ಸಬಲೀಕರಣದ ಕುರಿತು ತಮ್ಮ ಕವನ ವಾಚನ ಮಾಡಿದರು. ಅಕಾಡೆಮಿಯ ಸದಸ್ಯರಾದ ‍ಶೀ ಕೆನ್ಯೂಟ್‌ ಜೀವನ್‌ ಪಿಂಟೊ ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಅಕಾಡೆಮಿಯ ರಿಜಿಸ್ಟ್ರಾರ್‌ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಅತಿಥಿಗಳಿಗೆ ಸ್ಮರಣಿಕೆ ನೀಡಿ ವಂದಿಸಿದರು.

 

12. ಕೊಂಕಣಿ ಇ ಸಂವಹನ್‌ - ಮಂಗಳೂರು

ಕೊಂಕಣಿಯೇತರಿಗೆ ಕೊಂಕಣಿ ಭಾಷೆ ಕಲಿಕೆಗಾಗಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಹಾಗೂ ಸಂತ ಅಲೋಶಿಯಸ್‌ ಕಾಲೇಜು ಮಂಗಳೂರು ಇವರ ಸಹಯೋಗದಲ್ಲಿ ಕೊಂಕಣಿ ಇ ಸಂವಹನ ಆನ್‌ಲೈನ್‌ ಸರ್ಟಿಪಿಕೇಟ್‌ ಕೋರ್ಸ್‌ ಹಮ್ಮಿಕೊಂಡಿದೆ.  ದಿನಾಂಕ 02.10.2021 ರಂದು 40 ಗಂಟೆಗಳ ತರಗತಿಯ ಇ ಸಂವಹನ ಕಾರ್ಯಕ್ರಮದ ಉದ್ಘಾಟನೆಯನ್ನು  ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ರೋಯ್‌ ಕ್ಯಾಸ್ತಲಿನೊ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಕಾಲೇಜಿನ ರಿಜಿಸ್ಟ್ರಾರ್‌ ಡಾ ಆಲ್ವಿನ್‌ ಡೇಸಾ, ಪ್ರಾಂಶುಪಾಲರಾದ ಫಾ. ಡಾ ಪ್ರವೀಣ್‌ ಮಥಾಯಸ್‌ ಉಪಸ್ಥಿತರಿದ್ದರು. ಅಕಾಡೆಮಿ ಸದಸ್ಯರಾದ ಕೆನ್ಯೂಟ್‌ ಜೀವನ್‌ ಪಿಂಟೊ ಸ್ವಾಗತಿಸಿದರು, ನವೀನ್‌ ನಾಯಕ್‌ ವಂದಿಸಿದರು. ಜಾಗತಿಕವಾಗಿ ಏಕಕಾಲದಲ್ಲಿ ಕೊಂಕಣಿ ಭಾಷಾ ಕಲಿಕೆಗೆ ಅವಕಾಶ ನೀಡಲಾಗಿದ್ದು, ಪ್ರತಿ ಶನಿವಾರ ನೊಂದಾಯಿತ ವಿದ್ಯಾರ್ಥಿಗಳು ಗೂಗಲ್‌ ಮೀಟ್‌ ಮುಖಾಂತರ ತರಗತಿಗೆ ಹಾಜರಾಗಿ ಕೊಂಕಣಿ ಭಾಷಾ‍‍ಭ್ಯಾಸ ನಡೆಸುತ್ತಿದ್ದಾರೆ.

 

13. ಕೊಂಕಣಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ - ಮೂಡುಬೆಳ್ಳೆ

ಅಧ್ಯಕ್ಷರ ವಿವೇಚನೆ ಮೇರೆಗೆ ಯೋಜನೆಯಡಿ - ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮಂಗಳೂರು ಮತ್ತು ಸಂತ ಲಾರೆನ್ಸ್ ವಿದ್ಯಾ ಸಂಸ್ಥೆ ಮೂಡುಬೆಳ್ಳೆ ಇವರ ಸಂಯುಕ್ತ ಆಶ್ರಯದಲ್ಲಿ, ಪಿ. ಯೂ. ಕಾಲೇಜ್ ಸಭಾಂಗಣದಲ್ಲಿ *ಕೊಂಕಣಿ ಪುಸ್ತಕ ಪ್ರದರ್ಶನ ಹಾಗೂ ಮಾರಾಟ* ಕಾರ್ಯಕ್ರಮವನ್ನು ದಿನಾಂಕ 5.10.2021 ರಂದು ಹಮ್ಮಿಕೊಳ್ಳಲಾಗಿತ್ತು. ಪ್ರದರ್ಶನವನ್ನು ಕೊಂಕಣಿ ಹಾಸ್ಯ ಬರಹಗಾರ ಶ್ರೀ ಜೋಸೆಫ್ ಕ್ವಾಡ್ರಸ್ ರವರು ಉದ್ಘಾಟಿಸಿದರು. ಸಭಾಧ್ಯಕ್ಷರಾಗಿ ಅಕಾಡೆಮಿಯ ಅಧ್ಯಕ್ಷರಾದ  ಡಾ.ಕೆ.ಜಗದೀಶ್ ಪೈ, ಮುಖ್ಯ ಅತಿಥಿಗಳಾಗಿ ವಂದನೀಯ ಧರ್ಮ ಗುರು ಫಾ. ಜಾರ್ಜ್ ಡಿಸೋಜ, ‍ಶ್ರೀ ಜೆರಾಲ್ಡ್ ಫೆರ್ನಾಂಡಿಸ್, ಶ್ರೀ ಬಿ. ಮುಕುಂದ ಕಾಮತ್, ಅಕಾಡೆಮಿಯ ರಿಜಿಸ್ಟ್ರಾರ್ ಶ್ರೀ‌ ಆರ್.‌ ಮನೋಹರ್ ಕಾಮತ್ ರವರು ಭಾಗವಹಿಸಿದ್ದರು.  ಕಾಲೇಜ್ ಪ್ರಾಂಶುಪಾಲರಾದ ಶ್ರೀ ಲಾರ್ಸನ್ ಡಿಸೋಜ ಸ್ವಾಗತಿಸಿದರು. ಕೊಂಕಣಿ ಶಿಕ್ಷಕ ರೋಬರ್ಟ್ ಮಿನೇಜಸ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು, ಹಾಗೂ ಕೊಂಕಣಿ ಕಲಿಕೆ ಬಗ್ಗೆ ಮಾಹಿತಿ ನೀಡಿದರು. ಹೈಸ್ಕೂಲ್ ವಿಭಾಗದ ಮುಖ್ಯಸ್ಥೆ ಶ್ರೀಮತಿ ಸುನಿತಾ ಕಾಮತ್ ರವರು ಧನ್ಯವಾದವಿತ್ತರು. ಪುಸ್ತಕ ಪ್ರದರ್ಶನವು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ನಡೆಯಿತು. 

 

14. ಕನ್ನಡ ರಾಜ್ಯೋತ್ಸವ ವಿಶೇಷ ಕಾರ್ಯಕ್ರಮ –(1) “ಶುದ್ಧ ಕನ್ನಡದಲ್ಲಿ ಭಾಷಣ”

ಮಾತೃಭಾಷೆ ನಮ್ಮ ಜೀವದ ಭಾಷೆಯಾಗಲಿ ಮಾತೃ ಭಾಷೆಯ ಮೇಲಿನ ಅಭಿಮಾನ ಆ ನಾಡಿನ ಸಂಸ್ಕೃತಿಯ ಪ್ರತೀಕ. ಬ್ರಿಟಿಷರು ದೇಶ ಬಿಟ್ಟು ಹೋದರೂ ನಾವು ಆಂಗ್ಲ ಭಾಷೆಯ ಮೇಲಿನ ಅತಿಯಾದ ವ್ಯಾಮೋಹವನ್ನು ಬಿಡದಿರುವುದು ಖೇದಕರ ಸಂಗತಿ ಎಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ ಕೆ. ಜಗದೀಶ್ ಪೈ ನುಡಿದರು. ಅವರು ಕರ್ನಾಟಕ ಕೊಂಕಣಿ. ಸಾಹಿತ್ಯ ಅಕಾಡೆಮಿ ಮಂಗಳೂರು ಹಾಗೂ ಶ್ರೀಮದ್ ಭುವನೇಂದ್ರ ಪ್ರೌಢಶಾಲೆ ಕಾರ್ಕಳ ಇವರ ಸಹಯೋಗದಲ್ಲಿ ದಿನಾಂಕ 27.10.2021 ರಂದು ಹಮ್ಮಿಕೊಂಡ ಕನ್ನಡಕ್ಕಾಗಿ ನಾವು ಅಭಿಯಾನದ ಅಂಗವಾಗಿ ಆಯೋಜಿಸಿದ ಶುದ್ಧ ಕನ್ನಡದಲ್ಲಿ ನಿರ್ಗಳವಾಗಿ ಮಾತಾಡಿ ಸ್ವರ್ಧೆಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತಾಡಿದರು. ಮುಖ್ಯ ಅತಿಥಿಗಳಾಗಿ  ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ  ಶ್ರೀ ಕೊಂಡಳ್ಳಿ. ಪ್ರಭಾಕರ್ ಶೆಟ್ಟಿ  ಮಾತಾಡಿ ಸಾವಿರ ಸೌದೆಯು ಉರಿದಾಗ ಕಾಣುವ ಬೆಂಕಿಗಿಂತಲೂ ಒಂದು ದೀಪದ   ಬೆಳಕೇ  ಶ್ರೇಷ್ಟವಾದುದು ಅಂತೆಯೇ ನಾವು ಎಷ್ಟೇ ಭಾಷೆಯ ಬಗ್ಗೆ ತಿಳಿದಿದ್ದರೂ ಮಾತಾಡಿದರೂ  ಮಾತೃಭಾಷೆಯ ಸೊಗಡು  ಅಭಿಮಾನ ಅದು ಮಾತೃತ್ವದ  ಶಕ್ತಿ ಮತ್ತು ಪ್ರೀತಿಯಂತೆ ಎಂದು ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ಶ್ರೀಮದ್  ಭುವನೇಂದ್ರ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಆಧ್ಯಕ್ಷ ಶ್ರೀ ಕೆ ವಾಮನ ಕಾಮತ್ ವಹಿಸಿ ಕನ್ನಡ ನಾಡು ನುಡಿ ಹಾಗೂ ತಮ್ಮ ವಿದ್ಯಾರ್ಥಿ ಜೀವನದಲ್ಲಿ ಓದಿದ ಕನ್ನಡ ಪಠ್ಯಪುಸ್ತಕದಲ್ಲಿನ ಹಾಡು ನೆನಪಿಸಿಕೊಂಡು ಹಾಡು ಹಾಡಿದರು. ವೇದಿಕೆಯಲ್ಲಿ ಶಾಲಾ ಸಂಚಾಲಕ ಶ್ರೀ ಎಸ್ ನಿತ್ಯಾನಂದ ಪೈ ಉಪಸ್ಥಿತರಿದ್ದರು. ಭುವನೇಂದ್ರ ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವೃಂದಾ ಶೆಣೈ ಎಲ್ಲರನ್ನು ಸ್ವಾಗತಿಸಿದರು. ಶಿಕ್ಷಕ ಶ್ರೀ ಗಣೇಶ್. ಜಾಲ್ಸೂರು ಕಾರ್ಯಕ್ರಮ ನಿರೂಪಿಸಿ, ಶಿಕ್ಷಕಿ ಶ್ರೀ ಪೂರ್ಣಿಮಾ ಶೆಣೈ ಧನ್ಯವಾದ ವಿತ್ತರು. ಶಿಕ್ಷಕ ಶ್ರೀ ಆರ್ ನಾರಾಯಣ ಶೆಣೈ ಸ್ಪರ್ಧಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ತೀರ್ಪು ಗಾರರಾಗಿ ಶಾರೀರಿಕ ಶಿಕ್ಷಣ. ಶಿಕ್ಷಕ  ಶ್ರೀ ಸಂಜಯ ಕುಮಾರ್ ಶಿಕ್ಷಕಿ ಶ್ರೀಮತಿ ಪೂರ್ಣಿಮಾ ಶೆಣೈ, ಶಿಕ್ಷಕಿ ಶ್ರೀಮತಿ ಸೀಮಾ ಕಾಮತ್ ಸಹಕರಿಸಿದರು. ಈ ಸ್ಪರ್ಧೆಯಲ್ಲಿ ಶ್ರೀಮದ್  ಭುವನೇಂದ್ರ ಪ್ರೌಢ ಶಾಲೆ ಕಾರ್ಕಳ ಎಸ್ ವಿ ಟಿ ಆಂಗ್ಲ. ಮಾಧ್ಯಮ ಪ್ರೌಢ ಶಾಲೆ ಕಾರ್ಕಳ ಶ್ರೀ ಭುವನೇಂದ್ರ ಪದವಿಪೂರ್ವ ಕಾಲೇಜು, ಕಾರ್ಕಳ ಶ್ರೀ. ಭುವನೇಂದ್ರ ಪದವಿ ಕಾಲೇಜು ಕಾರ್ಕಳ ಇಲ್ಲಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಶ್ರೀಮದ್  ಭುವನೇಂದ್ರ ಪ್ರೌಢ ಶಾಲಾ ವಿದ್ಯಾರ್ಥಿಗಳಿಂದ ಕನ್ನಡ ಗೀತಾಗಾಯನವೂ ನಡೆಯಿತು.

 

15. ಕನ್ನಡ ರಾಜ್ಯೋತ್ಸವ ವಿಶೇಷ ಕಾರ್ಯಕ್ರಮ (2) ಕರ್ನಾಟಕದಲ್ಲಿ ಕನ್ನಡ ಕೊಂಕಣಿ ಸಾಂಸ್ಕೃತಿಕ ಸಂಬಂಧ -

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಹಾಗೂ ಕೆನರಾ ಪದವಿ ಪೂರ್ವ ಕಾಲೇಜು ಕನ್ನಡ ಬಳಗ ಸಹಯೋಗದಲ್ಲಿ ದಿನಾಂಕ 29.10.2021 ರಂದು ಕೆನರಾ ಪದವಿ ಪೂರ್ವ ಕಾಲೇಜು, ಜೈಲ್‌ ರೋಡ್‌ ಮಂಗಳೂರು ಇಲ್ಲಿ "ಕರ್ನಾಟಕದಲ್ಲಿ ಕನ್ನಡ ಕೊಂಕಣಿ ಸಾಂಸ್ಕೃತಿಕ ಸಂಬಂಧ" ಉಪನ್ಯಾಸ ಕಾರ್ಯಕ್ರಮವನ್ನು ಅಕಾಡೆಮಿ ಸದಸ್ಯರಾದ ಶ್ರೀ ಕೆನ್ಯೂಟ್‌ ಜೀವನ ಪಿಂಟೊ ಇವರ ಸಂಚಾಲಕತ್ವದಲ್ಲಿ ನೆರವೇರಿಸಲಾಯಿತು. ಕನ್ನಡ ಬಳಗದ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಅಕಾಡೆಮಿಯ ಸದಸ್ಯರಾದ ಅರುಣ್‌ ಜಿ ಶೇಟ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಶ್ರೀ ವೆಂಕಟೇಶ್‌ ನಾಯಕ್‌ ತಮ್ಮ ಉಪನ್ಯಾಸದಲ್ಲಿ ಕೊಂಕಣಿ ಭಾಷೆ, ಭಾಷಿಕ ಜನರು ಗೋವಾದಿಂದ ಕರ್ನಾಟಕದ ಕಡೆಗೆ ನಡೆದು ಬಂದ ದಾರಿ, ಕರ್ನಾಟಕದಲ್ಲಿ ಕನ್ನಡ ಭಾಷೆಯೊಂದಿಗೆ ಮೆರೆದ ಸಾಮರಸ್ಯ, ಹಾಗೂ ಕೊಂಕಣಿಗರು ಕನ್ನಡಕ್ಕಾಗಿ ನೀಡಿದೆ ಕೊಡುಗೆಗಳ ಬಗ್ಗೆ ಸವಿಸ್ತಾರವಾದ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಕೆನರಾ ಪದವಿಪೂರ್ವ ಕಾಲೇಜಿನ ಸಂಚಾಲಕರಾದ ‍ಶ್ರೀ ಬಸ್ತಿ ಪುರಷೋತ್ತಮ್‌ ಶೆಣೈ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾಲೇಜಿನ ಡೀನ್‌ ಶ್ರೀ ಗೋಪಾಲ ಕೃಷ್ಣ ಶೆಟ್ಟಿ, ಪ್ರಾಂಶುಪಾಲರಾದ ಶ್ರೀಮತಿ ಲತಾ ಮಹೇಶ್ವರಿ ಉಪಸ್ಥಿತರಿದ್ದರು. ಕನ್ನಡ ಬಳಗದ ವಿದ್ಯಾರ್ಥಿಗಳು ಕಾರ್ಯಕ್ರಮ ನಿರೂಪಿಸಿ, ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

 

16. ಕನ್ನಡ ರಾಜ್ಯೋತ್ಸವ ವಿಶೇಷ ಕಾರ್ಯಕ್ರಮ-(3) ಕನ್ನಡದಲ್ಲಿ ಶಿಶು ಸಾಹಿತ್ಯ -

ದಿನಾಂಕ 29.10.2021 ರ ಅಪರಾಹ್ನ 2.00 ಗಂಟೆಗೆ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಂಕಣಿ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್‌ ಆರ್.‌ ಮನೋಹರ್‌ ಕಾಮತ್‌, ಧಾರವಾಡದ ನಿವೃತ್ತ ಉಪನ್ಯಾಸಕ ಶ್ರೀ ಶ್ಯಾಮಸುಂದರ ಬಿದಿರಕುಂದಿ, ಸ್ನೇಹ ‍ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ‍ಶ್ರೀಮತಿ ಜಯಲಕ್ಷ್ಮೀ ದಾಮ್ಲೆ, ಕನ್ನಡದಲ್ಲಿ ಶಿಶು ಸಾಹಿತ್ಯದ ಬಗ್ಗೆ ಉಪನ್ಯಾಸ ಮತ್ತು ಸಂಪನ್ನೂಲ ವ್ಯಕ್ತಿಯಾಗಿ, ನಿವೃತ್ತ  ಪ್ರೊಪೆಸರ್‌, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಹಾಗೂ ಕವಿ, ಸಾಹಿತಿ ಆಗಿರುವ ಡಾ.ಚಂದ್ರಶೇಖರ ದಾಮ್ಲೆ ಮತ್ತು ಶಿಶು ಗೀತಾ ಗಾಯನ ಮಾಡುವ ಶಿಕ್ಷಕಿ ಶ್ರೀಮತಿ ಮೀನಾಕ್ಷಿ ಕುತ್ಯಾಳರವರು ವೇದಿಕೆಯಲ್ಲಿ ಉಪಸ್ಥತರಿದ್ದರು. ಸ್ನೇಹಾ ಶಿಕ್ಷಣ ಸಂಸ್ಥೆ ಸುಳ್ಯ ಇಲ್ಲಿನ  ಶಿಕ್ಷಕಿಯವರು ಪ್ರಾರ್ಥನೆ ಮಾಡಿ ನಾಡಗೀತೆ ಹಾಡಿದರು. ಕೊಂಕಣಿ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್‌ ರವರು ಅತಿಥಿಗಳನ್ನು ಸ್ವಾಗತಿಸಿದರು. ಧಾರವಾಡದ ನಿವೃತ್ತ ಉಪನ್ಯಾಸಕರು ಕವಿ ಮತ್ತು ಸಾಹಿತಿಗಳಾದ ‍ಶ್ರೀ ಶ್ಯಾಮಸುಂದರ ಬಿದಿರಕುಂದಿ ಇವರು ವರಕವಿ ದ.ರಾ ಬೇಂದ್ರೆ ಇವರ ಜೀವನ ಮತ್ತು ಸಾಹಿತ್ಯ ರಚನೆಯ ಬಗ್ಗೆ ಉಪನ್ಯಾಸ ನೀಡಿದರು ಮತ್ತು ಅವರ ಕವಿತೆ  "ಬಾರೋ ಸಾಧನ ಕೇರಿಗೆ" ಹಾಡನ್ನು ಹಾಡಿದರು.  ಡಾ.ಚಂದ್ರಶೇಖರ ದಾಮ್ಲೆಯವರು ಪಳಕಳ ಸೀತಾರಾಮ ಭಟ್‌ ಮತ್ತು ಪಂಜೆ ಮಂಗೇಶ ರಾವ್‌ ರವರ ಶಿಶು ಸಾಹಿತ್ಯದ ಬಗ್ಗೆ ಉಪನ್ಯಾಸ ನೀಡಿ ಮಕ್ಕಳಿಗೆ  ಮುದ ನೀಡುವ ಸಾಹಿತ್ಯದ ಅಂಶಗಳನ್ನು ವಿವರಿಸಿದರು. ‍ಶ್ರೀಮತಿ ಮೀನಾಕ್ಷಿ ಕುತ್ಯಾಳ ಮತ್ತು ಇತರ ಶಿಕ್ಷಕಿಯರು ಶಿಶು ಗೀತೆಗಳನ್ನು ಹಾಡಿ, ಸ್ನೇಹ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಅಭಿನಯಿಸಿದರು. ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ಜಯಲಕ್ಷ್ಮೀ ದಾಮ್ಲೆ ವಂದಿಸಿದರು. ಶಾಲಾ ವಿದ್ಯಾರ್ಥಿಗಳು, ಪೋಷಕರು ಮತ್ತು ಸಾಹಿತ್ಯಾಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 

17. ರೇಡಿಯೋ ಸಾರಂಗ್-‌ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಹಾಗೂ ರೇಡಿಯೋ ಸಾರಂಗ್‌ ಸಹಯೋಗದಲ್ಲಿ ವಿ‍ಶೇಷ ಕಾರ್ಯಕ್ರಮ ದಿನಾಂಕ 01.11.2021 ರಂದು ಪ್ರಸಾರಗೊಂಡಿತು.

 

18. ಯೆಯಾ ಹಾಸೊಂವ್ಯಾ -2 - ತೃತೀಯ ಹಾಗೂ ಅಂತಿಮ ಆವೃತ್ತಿ

ಯೆಯಾ ಹಾಸೊಂವ್ಯಾ - 2 ಕಾರ್ಯಕ್ರಮದ ತೃತೀಯ ಹಾಗೂ ಅಂತಿಮ ಆವೃತ್ತಿಯು ದಿನಾಂಕ 26.11.2021 ರಂದು ಮಂಗಳೂರಿನ ಪುರಭವನದಲ್ಲಿ ನಡೆಯಿತು. 6 ಕಲಾತಂಡಗಳು ಈ ಆವೃತ್ತಿಯಲ್ಲಿ ತಮ್ಮ ಕಲಾಪ್ರದರ್ಶನವನ್ನು ನೀಡಿದರು. ಕಲಾವಿದರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್, ಶ್ರೀ ಚರಣ್‌ ಕುಮಾರ್‌ ಮಲ್ಯ ತೀರ್ಪುಗಾರರಾಗಿ ಹಾಗೂ ಶ್ರೀ ಕಾಸರಗೋಡು ಚಿನ್ನಾರವರು ಮಹಾಗುರುಗಳಾಗಿ ಭಾಗವಹಿಸಿದ್ದರು. ದಿ ಟೀಮ್‌ ಎಕ್ಸ್‌ಪ್ರೆಶನ್‌ ಬ್ರಹ್ಮಾವರ ತಂಡವು ಪ್ರಥಮ ಸ್ಥಾನ ಗಳಿಸಿತು ವಿಜೇತರನ್ನು ರೂ 100000/-ನಗದು, ಸ್ವರ್ಣ ಫಲಕ ದೊಂದಿಗೆ ಗೌರವಿಸಲಾಯಿತು, ಪಲ್ಲವಿ ಕಲಾತಂಡ, ಕಾರ್ಕಳ ದ್ವಿತೀಯ ಸ್ಥಾನ ಗಳಿಸಿತು. ವಿಜೇತರನ್ನು ರೂ 50000/-ನಗದು, ಸ್ವರ್ಣ ಫಲಕ ದೊಂದಿಗೆ ಗೌರವಿಸಲಾಯಿತು.

 

19. ಉಳ್ಳಾಲ ಅಬ್ಬಕ್ಕರಾಣಿ ಉತ್ಸವದಲ್ಲಿ ಕೊಂಕಣಿ ಕಾರ್ಯಕ್ರಮ

ಅಧ್ಯಕ್ಷರ ವಿವೇಚನಾ ಕಾರ್ಯಕ್ರಮಗಳ  ಯೋಜನೆಯಡಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ(ರಿ) ಇವರ ಸಹಯೋಗದಲ್ಲಿ ವೀರರಾಣಿ ಅಬ್ಬಕ್ಕ ಉತ್ಸವ 2021 ರಜತ ಸಂಭ್ರಮ ಕಾರ್ಯಕ್ರಮದಲ್ಲಿ ಕು| ರೆಮೋನಾ ಇವೆಟ್‌ ಪಿರೇರಾ ರವರ ನೃತ್ಯ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

 

20. ಕಾನೂನು ಅರಿವು ಶಿಬಿರದಲ್ಲಿ ಪುಸ್ತಕ ಪ್ರದರ್ಶನ ಹಾಗೂ ಮಾರಾಟ

ದಿನಾಂಕ 30.12.2021 ರಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ದಕ್ಷಿಣ ಕನ್ನಡ ಇವರ ನೇತೃತ್ವದಲ್ಲಿ ಆಳ್ವಾಸ್‌ ಶಿಕ್ಷಣ ಸಂಸ್ಥೆಯ ನುಡಿಸಿರಿ ಸಭಾಂಗಣದಲ್ಲಿ ನಡೆದ ಕಾನೂನು ಸೇವಾ ಶಿಬಿರದಲ್ಲಿ ಕೊಂಕಣಿ ಪುಸ್ತಕಗಳ ಪ್ರದರ್ಶನ ಹಾಗೂ ಮಾರಾಟವನ್ನು ಏರ್ಪಡಿಸಲಾಗಿತ್ತು. ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎಸ್. ಅಬ್ದುಲ್‌ ನಝೀರ್‌  ರವರು ಕಾರ್ಯಕ್ರಮವನ್ನು ಉದ್ಟಾಟಿಸಿ, ದೇಶದ ಜನಸಂಖ್ಯೆಗೆ ಅನುಗುಣವಾಗಿ ನ್ಯಾಯಾಲಯಗಳು ಇಲ್ಲದಿರುವುದರಿಂದ ಪ್ರಕರಣಗಳು ಬಾಕಿ ಉಳಿಯುವುದು ಸಹಜ ಆದರೆ ಪ್ರಜೆಗಳು ಯಾವುದೇ ಸಂದರ್ಭದಲ್ಲೂ ಸಮಸ್ಯೆಗೆ ತಲೆಗಾಗಿ ಕಾನೂನಿನ ನೆರವು ಪಡೆಯುವುದರಿಂದ ವಿಮುಖರಾಗಬಾರದು. ಕಾನೂನಿನ ಅರಿವು ಎಲ್ಲರಿಗೂ ಲಭಿಸುವಂತಾಗಬೇಕು ಎಂದು ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ರಾಜ್ಯ ಕಾನೂನು ಸೇವೆ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ ನ್ಯಾ| ವೀರಪ್ಪ, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ, ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ ಎಂ ಮೋಹನ ಆಳ್ವ ಇತರರು ಉಪಸ್ಥಿತರಿದ್ದರು.

 

21.ತಿಂಗಳ ಅತಿಥಿ ಕಾರ್ಯಕ್ರಮ(1) - ‍ಶ್ರೀ ಶೇಖರ ಗೌಡ

ಅಕಾಡೆಮಿಯ ಕ್ರೀಯಾಯೋಜನೆಯಡಿ ಹಮ್ಮಿಕೊಂಡಿರುವ ತಿಂಗಳ ಅತಿಥಿ ಕಾರ್ಯಕ್ರಮದ ಮೊದಲ ಕಾರ್ಯಕ್ರಮ ಕೊಂಕಣಿ ಕುಡುಬಿ ಸಮಾಜದ ಮುಖಂಡರಾದ ಶ್ರೀ ಶೇಖರ ಗೌಡ ಅವರೊಂದಿಗಿನ ಸಂದರ್ಶನ ಕಾರ್ಯಕ್ರಮವು ದಿನಾಂಕ 06.01.2022 ರಂದು ಅಕಾಡೆಮಿ ಯೂಟೂಬ್‌ ಹಾಗೂ ಪೇಸ್‌ಬುಕ್‌ ಚಾನೆಲ್‌ನಲ್ಲಿ ಪ್ರಸಾಗೊಂಡಿತು. ಅಕಾಡೆಮಿಯ ಸದಸ್ಯರಾದ ಶ್ರೀ ಗೋಪಾಲ ಕೃಷ್ಣ ಭಟ್‌ ರವರು ಈ ಸಂದರ್ಶನವನ್ನು ನಡೆಸಿಕೊಟ್ಟುರು. ಅತಿಥಿಗಳು ಕುಡುಬಿ ಸಮಾಜದ ಆಚಾರ-ವಿಚಾರ, ಸಂಸ್ಕೃತಿಯ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ನೀಡಿದರು. ಕುಡುಬಿ ಜನಾಂಗದ ಏಳಿಗೆಗಾಗಿ ಮುಂದೆ ಆಗಬೇಕಾಗಿರುವ ಪ್ರಗತಿ ಕಾರ್ಯಗಳ ಬಗ್ಗೆಯು ತಿಳಿಸಿದರು.

 

22. ತಿಂಗಳ ಅತಿಥಿ ಕಾರ್ಯಕ್ರಮ(2) - ‍ಶ್ರೀಮತಿ ಗೀತಾ ಸಿ ಕಿಣಿ

ಅಕಾಡೆಮಿಯ ಕ್ರೀಯಾಯೋಜನೆಯಡಿ ಹಮ್ಮಿಕೊಂಡಿರುವ ತಿಂಗಳ ಅತಿಥಿ ಕಾರ್ಯಕ್ರಮದ ದ್ವಿತೀಯ ಕಾರ್ಯಕ್ರಮ ಲೇಖಕಿ, ಕಸೂತಿ ತಜ್ಞೆ ಶ್ರೀಮತಿ ಗೀತಾ ಸಿ. ಕಿಣಿ ಅವರೊಂದಿಗಿನ ಸಂದರ್ಶನ ಕಾರ್ಯಕ್ರಮವು ದಿನಾಂಕ 12.01.2022 ರಂದು ಅಕಾಡೆಮಿ ಯೂಟೂಬ್‌ ಹಾಗೂ ಪೇಸ್‌ಬುಕ್‌ ಚಾನೆಲ್‌ನಲ್ಲಿ ಪ್ರಸಾಗೊಂಡಿತು. ಅಕಾಡೆಮಿಯ ಸದಸ್ಯರಾದ ಶ್ರೀ ಗೋಪಾಲ ಕೃಷ್ಣ ಭಟ್‌ ರವರು ಈ ಸಂದರ್ಶನವನ್ನು ನಡೆಸಿಕೊಟ್ಟುರು.

 

23. ವಿಶ್ವ ಕೊಂಕಣಿ ಸರ್ಧಾರ್‌ - ‍ದಿ| ಬಸ್ತಿ ವಾಮನ್‌ ಶೆಣೈ ಶ್ರದ್ದಾಂಜಲಿ ಸಭೆ

ವಿಶ್ವ ಕೊಂಕಣಿ ಸರ್ದಾರ್‌ ಹಾಗೂ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ದಿ| ಬಸ್ತಿ ವಾಮನ್‌ ಶೆಣೈ ಯವರು ದಿನಾಂಕ 02.01.2022 ರಂದು ಧೈವಾಧೀನರಾದರು. ಮೃತರು ಸುಮಾರು 60 ವರ್ಷಗಳ ಕಾಲ ಕೊಂಕಣಿ ಭಾಷೆ ಸಂಸ್ಕೃತಿಗಾಗಿ ದುಡಿದು ವಿಶ್ವ ಕೊಂಕಣಿ ಕೇಂದ್ರವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದವರು. ಕೊಂಕಣಿ ಭಾಷೆಗೆ ಸಾಂವಿಧಾನಿಕ ಮಾನ್ಯತೆ ದೊರಕಲು ಸಹ ತಮ್ಮ ಅಮೂಲ್ಯ ಸೇವೆಯನ್ನು ನೀಡಿದ್ದಾರೆ. ಇವರ ಶ್ರದ್ದಾಂಜಲಿ ಸಭೆಯನ್ನು ದಿನಾಂಕ 13.01.2021 ರಂದು ಮಂಗಳೂರಿನ, ನವರತ್ನ ಪ್ಯಾಲೇಸ್‌ನಲ್ಲಿ ಹಮ್ಮಿಕೊಳ್ಳಲಾಯಿತು. ಅಕಾಡೆಮಿಯ ಅಧ್ಯಕ್ಷರಾದ ಡಾ. ಕೆ ಜಗದೀಶ್‌ ಪೈ ಹಾಗೂ ಕೊಂಕಣಿ ಭಾಷೆಯ ವಿವಿಧ ಸಮುದಾಯ ಮುಖಂಡರುಗಳು ಸಭೆಯಲ್ಲಿ ಭಾಗವಹಿಸಿ ದಿ| ಬಸ್ತಿ ವಾಮನ್‌ ಶೆಣೈಯವರೊಂದಿಗಿನ ಒಡನಾಟದ ನೆನಪುಗಳನ್ನು ಹಂಚಿಕೊಂಡು ನುಡಿನಮನ ಸಲ್ಲಿಸಿದರು. ಅಕಾಡೆಮಿಯ ಸದಸ್ಯರಾದ ‍ಶ್ರೀ ಗೋಪಾಲಕೃಷ್ಣ ಭಟ್‌ ಕಾರ್ಯಕ್ರಮ ನಿರೂಪಿಸಿದರು, ‍ಶ್ರೀ ನರಸಿಂಹ ಕಾಮತ್‌ ಸ್ವಾಗತಿಸಿದರು ಹಾಗೂ ‍ಶ್ರೀ ಅರುಣ್‌ ಜಿ ಶೇಟ್‌ ವಂದನಾರ್ಪಣೆ ಗೈದರು. ಅಕಾಡೆಮಿಯ ಸದಸ್ಯರು ಹಾಗೂ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 

24. ತಿಂಗಳ ಅತಿಥಿ ಕಾರ್ಯಕ್ರಮ(3) - ‍ಶ್ರೀ ಅವಿತಾಸ್‌ ಎಡೋಲ್ಪಸ್‌ ಕುಟಿನ್ಹಾ (ಡೊಲ್ಲಾ)

ಅಕಾಡೆಮಿಯ ಕ್ರೀಯಾಯೋಜನೆಯಡಿ ಹಮ್ಮಿಕೊಂಡಿರುವ ತಿಂಗಳ ಅತಿಥಿ ಕಾರ್ಯಕ್ರಮದ ತೃತೀಯ ಕಾರ್ಯಕ್ರಮ ಕೊಂಕಣಿ ನಾಟಕ ಕಲಾವಿದರಾದ ಶ್ರೀ ವಿತಾಸ್‌ ಎಡೋಲ್ಪಾಸ್‌ ಕುಟಿನ್ಹಾ ಅವರೊಂದಿಗಿನ ಸಂದರ್ಶನ ಕಾರ್ಯಕ್ರಮವು ದಿನಾಂಕ 14.01.2022 ರಂದು ಅಕಾಡೆಮಿ ಯೂಟೂಬ್‌ ಹಾಗೂ ಪೇಸ್‌ಬುಕ್‌ ಚಾನೆಲ್‌ನಲ್ಲಿ ಪ್ರಸಾಗೊಂಡಿತು. ಅಕಾಡೆಮಿಯ ಸದಸ್ಯರಾದ ಶ್ರೀ ಗೋಪಾಲ ಕೃಷ್ಣ ಭಟ್‌ ರವರು ಈ ಸಂದರ್ಶನವನ್ನು ನಡೆಸಿಕೊಟ್ಟುರು.

 

25. ತಿಂಗಳ ಅತಿಥಿ ಕಾರ್ಯಕ್ರಮ(4) - ‍ಶ್ರೀ ಹ್ಯಾರಿ ಡಿಸೋಜಾ

ಅಕಾಡೆಮಿಯ ಕ್ರೀಯಾಯೋಜನೆಯಡಿ ಹಮ್ಮಿಕೊಂಡಿರುವ ತಿಂಗಳ ಅತಿಥಿ ಕಾರ್ಯಕ್ರಮದ ನಾಲ್ಕನೇ ಕಾರ್ಯಕ್ರಮ ಬ್ರಾಸ್‌ ಬ್ಯಾಂಡ್‌ ಕಲಾವಿದರಾದ ಶ್ರೀ ಹ್ಯಾರಿ ಡಿಸೋಜಾ ಅವರೊಂದಿಗಿನ ಸಂದರ್ಶನ ಕಾರ್ಯಕ್ರಮವು ದಿನಾಂಕ 14.01.2022 ರಂದು ಅಕಾಡೆಮಿ ಯೂಟೂಬ್‌ ಹಾಗೂ ಪೇಸ್‌ಬುಕ್‌ ಚಾನೆಲ್‌ನಲ್ಲಿ ಪ್ರಸಾಗೊಂಡಿತು. ಅಕಾಡೆಮಿಯ ಸದಸ್ಯರಾದ ಶ್ರೀ ಗೋಪಾಲ ಕೃಷ್ಣ ಭಟ್‌ ರವರು ಈ ಸಂದರ್ಶನವನ್ನು ನಡೆಸಿಕೊಟ್ಟರು.

 

26. ತಿಂಗಳ ಅತಿಥಿ ಕಾರ್ಯಕ್ರಮ(5) - ‍ಅಷ್ಟಾವಧಾನಿ ಶ್ರೀ ಉಮೇಶ್‌ ಗೌತಮ್‌ ನಾಯಕ್

ಅಕಾಡೆಮಿಯ ಕ್ರೀಯಾಯೋಜನೆಯಡಿ ಹಮ್ಮಿಕೊಂಡಿರುವ ತಿಂಗಳ ಅತಿಥಿ ಕಾರ್ಯಕ್ರಮದ ಐದನೇ ಆವೃತ್ತಿ ಅಷ್ಟಾವಧಾನಿ ಶ್ರೀ ಉಮೇಶ್‌ ಗೌತಮ್‌ ನಾಯಕ್ ಅವರೊಂದಿಗಿನ ಸಂದರ್ಶನ ದಿನಾಂಕ 22.01.2022 ರಂದು ಅಕಾಡೆಮಿ ಯೂಟೂಬ್‌ ಹಾಗೂ ಪೇಸ್‌ಬುಕ್‌ ಚಾನೆಲ್‌ನಲ್ಲಿ ಪ್ರಸಾಗೊಂಡಿತು. ಅಕಾಡೆಮಿಯ ಸದಸ್ಯರಾದ ಶ್ರೀ ಗೋಪಾಲ ಕೃಷ್ಣ ಭಟ್‌ ರವರು ಈ ಸಂದರ್ಶನವನ್ನು ನಡೆಸಿಕೊಟ್ಟರು.

 

27. ತಿಂಗಳ ಅತಿಥಿ ಕಾರ್ಯಕ್ರಮ(6) - ಶ್ರೀ ಸ್ಟೀವನ್‌ ಕ್ವಾಡ್ರಸ್

ಅಕಾಡೆಮಿಯ ಕ್ರೀಯಾಯೋಜನೆಯಡಿ ಹಮ್ಮಿಕೊಂಡಿರುವ ತಿಂಗಳ ಅತಿಥಿ ಕಾರ್ಯಕ್ರಮದ ಆವೃತ್ತಿ ಕಾರ್ಯಕ್ರಮ ಕೊಂಕಣಿ ಸಾಹಿತಿ ಶ್ರೀ ಸ್ಟೀವನ್‌ ಕ್ವಾಡ್ರಸ್ ಅವರೊಂದಿಗಿನ ಸಂದರ್ಶನ ದಿನಾಂಕ 25.01.2022 ರಂದು ಅಕಾಡೆಮಿ ಯೂಟೂಬ್‌ ಹಾಗೂ ಪೇಸ್‌ಬುಕ್‌ ಚಾನೆಲ್‌ನಲ್ಲಿ ಪ್ರಸಾಗೊಂಡಿತು.‌ ‍‍ಶ್ರೀಯುತರು ಸಂದರ್ಶನದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಜೀವನದ ಪಯಣ, ಹಾಗೂ ಕೊಂಕಣಿ ಸಾಹಿತ್ಯ ಬೆಳೆದು ಬಂದ ಹಾದಿಯ ಕುರಿತು ಮಾಹಿತಿ ನೀಡಿದರು. ಅಕಾಡೆಮಿಯ ಸದಸ್ಯರಾದ ಶ್ರೀ ಗೋಪಾಲ ಕೃಷ್ಣ ಭಟ್‌ ರವರು ಈ ಸಂದರ್ಶನವನ್ನು ನಡೆಸಿಕೊಟ್ಟರು.

 

28. ತಿಂಗಳ ಅತಿಥಿ ಕಾರ್ಯಕ್ರಮ(7) - ‍ಶ್ರೀ ಬಿ. ಮಾಧವ ಖಾರ್ವಿ

ಅಕಾಡೆಮಿಯ ಕ್ರೀಯಾಯೋಜನೆಯಡಿ ಹಮ್ಮಿಕೊಂಡಿರುವ ತಿಂಗಳ ಅತಿಥಿ ಕಾರ್ಯಕ್ರಮದ ಏಳನೇ ಆವೃತ್ತಿ ಕೊಂಕಣಿ ಖಾರ್ವಿ ಸಮುದಾಯದ ಹಿರಿಯ ವ್ಯಕ್ತಿ, ಸಂಘಟಕ ಶ್ರೀ ಬಿ. ಮಾಧವ ಖಾರ್ವಿ ಅವರೊಂದಿಗಿನ ಸಂದರ್ಶನ ದಿನಾಂಕ 25.01.2022 ರಂದು ಅಕಾಡೆಮಿ ಯೂಟೂಬ್‌ ಹಾಗೂ ಪೇಸ್‌ಬುಕ್‌ ಚಾನೆಲ್‌ನಲ್ಲಿ ಪ್ರಸಾಗೊಂಡಿತು. ಕೊಂಕಣಿ ಖಾರ್ವಿ ಸಮುದಾಯದ ಆಚಾರ- ವಿಚಾರ ಸಂಸ್ಕೃತಿಯ ಬಗ್ಗೆ ಶ್ರೀಯುತರು ಅಮೂಲ್ಯ ಮಾಹಿತಿ ನೀಡಿದರು. ಅಕಾಡೆಮಿಯ ಸದಸ್ಯರಾದ ಶ್ರೀ ಗೋಪಾಲ ಕೃಷ್ಣ ಭಟ್‌ ರವರು ಈ ಸಂದರ್ಶನವನ್ನು ನಡೆಸಿಕೊಟ್ಟರು.

 

29. ತಿಂಗಳ ಅತಿಥಿ ಕಾರ್ಯಕ್ರಮ(8) - ‍ಶ್ರೀ ರಾಮ್‌ದಾಸ್‌ ಗುಲ್ವಾಡಿ

ಅಕಾಡೆಮಿಯ ಕ್ರೀಯಾಯೋಜನೆಯಡಿ ಹಮ್ಮಿಕೊಂಡಿರುವ ತಿಂಗಳ ಅತಿಥಿ ಕಾರ್ಯಕ್ರಮದ ಎಂಟನೇ ಆವೃತ್ತಿ ಕೊಂಕಣಿ ನಾಟಕಗಾರ, ರಂಗಕರ್ಮಿ ಶ್ರೀ ರಾಮ್‌ದಾಸ್‌ ಗುಲ್ವಾಡಿ ಅವರೊಂದಿಗಿನ ಸಂದರ್ಶನ ದಿನಾಂಕ 25.01.2022 ರಂದು ಅಕಾಡೆಮಿ ಯೂಟೂಬ್‌ ಹಾಗೂ ಪೇಸ್‌ಬುಕ್‌ ಚಾನೆಲ್‌ನಲ್ಲಿ ಪ್ರಸಾಗೊಂಡಿತು. ಅಕಾಡೆಮಿಯ ಸದಸ್ಯರಾದ ಶ್ರೀ ಗೋಪಾಲ ಕೃಷ್ಣ ಭಟ್‌ ರವರು ಈ ಸಂದರ್ಶನವನ್ನು ನಡೆಸಿಕೊಟ್ಟರು.

 

30. ತಿಂಗಳ ಅತಿಥಿ ಕಾರ್ಯಕ್ರಮ (9) - ‍ಶ್ರೀ ಮುರಳೀಧರ ಕಾಮತ್

ಅಕಾಡೆಮಿಯ ಕ್ರೀಯಾಯೋಜನೆಯಡಿ ಹಮ್ಮಿಕೊಂಡಿರುವ ತಿಂಗಳ ಅತಿಥಿ ಕಾರ್ಯಕ್ರಮದ ಒಂಬತ್ತನೇ ಆವೃತ್ತಿ ಕೊಂಕಣಿ ಸಂಗೀತ ಕಲಾವಿದರಾದ ಶ್ರೀ ಮುರಳೀಧರ ಕಾಮತ್ ಅವರೊಂದಿಗಿನ ಸಂದರ್ಶನ ದಿನಾಂಕ 26.01.2022 ರಂದು ಅಕಾಡೆಮಿ ಯೂಟೂಬ್‌ ಹಾಗೂ ಪೇಸ್‌ಬುಕ್‌ ಚಾನೆಲ್‌ನಲ್ಲಿ ಪ್ರಸಾಗೊಂಡಿತು. ಅಕಾಡೆಮಿಯ ಸದಸ್ಯರಾದ ಶ್ರೀ ಗೋಪಾಲ ಕೃಷ್ಣ ಭಟ್‌ ರವರು ಈ ಸಂದರ್ಶನವನ್ನು ನಡೆಸಿಕೊಟ್ಟರು.

 

31. ಪೊಯೆಟಿಕಾ ಕವಿಗೋಷ್ಠಿ-2

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಹಾಗೂ ಪೊಯೆಟಿಕಾ ಕವಿಂಚೊ ಪಂಗಡ್‌ ಇವರ ಸಹಯೋಗದಲ್ಲಿ ದಿನಾಂಕ 26.01.2022 ರಂದು ಶ್ರೀ ವಿನೋದ್‌ ಪಿಂಟೊ ತಾಕೊಡೆ ಇವರ ನಿವಾಸದಲ್ಲಿ "ಪೊಯೆಟಿಕಾ ಕವಿಗೋಷ್ಠಿ-2 ಕಾರ್ಯಕ್ರಮ ಅಕಾಡೆಮಿಯ ಸದಸ್ಯರಾದ ಶ್ರೀ ಕೆನ್ಯೂಟ್‌ ಜೀವನ್‌ ಪಿಂಟೊ ಇವರ ಸಂಚಾಲಕತ್ವದಲ್ಲಿ ನಡೆಯಿತು. ಕೊಂಕಣಿ ಕವಿಗಳಾದ ಶ್ರೀ ಟಾಯ್ಟಸ್‌ ನೊರನ್ಹಾ ಅವರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಅಕಾಡೆಮಿಯ ಅಧ್ಯಕ್ಷರು ಮಾತನಾಡಿ ಮಾತೃಭಾಷೆಯ ಮಹತ್ವ, ಪ್ರಸ್ತುತ ಸಮಾಜದಲ್ಲಿ ಆಂಗ್ಲ ಭಾಷೆಯ ಪ್ರಭಾವದಿಂದಾಗಿ ಕೊಂಕಣಿ ಭಾಷೆಯು ನಲುಗುತ್ತಿದ್ದು, ಭಾಷೆಯನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಕೊಂಕಣಿಗರಾದ ನಾವೇ ನಮ್ಮ ಮಾತೃ ಭಾಷೆಯ ಮೇಲೆ ಅಭಿಮಾನ ತೋರದಿದ್ದರೆ ಈಗಾಗಲೇ ನಶಿಸಿಹೋಗಿರುವ ಹಲವಾರು ಭಾಷೆಗಳ ಸಾಲಿಗೆ ಕೊಂಕಣಿ ಭಾಷೆಯು ಸೇರುವಂತಾಗಬಹುದು. ಆದ್ದರಿಂದ ನಾವೆಲ್ಲೂ ಕೊಂಕಣಿರಾಗಿದ್ದು ಕೊಂಕಣಿ ಭಾಷೆಗಾಗಿ, ಭಾಷೆಯ ಸಾಹಿತ್ಯ, ಕೊಂಕಣಿ ಸಂಸ್ಕೃತಿಯ ಏಳಿಗೆಗಾಗಿ ‍ಶ್ರಮಿಸೋಣವೆಂದು ತಿಳಿಸಿದರು. 22 ಮಂದಿ ಕವಿಗಳು ಈ ಕಾರ್ಯಕ್ರಮದಲ್ಲಿ ತಮ್ಮ ಸುಮಧುರ ಕವಿತೆಗಳನ್ನು ವಾಚಿಸಿದರು. ಕಾರ್ಯಕ್ರಮದಲ್ಲಿ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ರಾಯ್‌ ಕ್ಯಾಸ್ತೆಲಿನೊ, ಅಕಾಡೆಮಿ ರಿಜಿಸ್ಟ್ರಾರ್‌ ಆರ್.‌ ಮನೋಹರ್‌ ಕಾಮತ್, ‍ಶ್ರೀ ನವೀನ್‌ ಪಿರೇರಾ ಸುರತ್ಕಲ್ ಹಾಗೂ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಕವಿಗಳು ಹಾಗೂ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಶ್ರೀ ವಿನೋದ್‌ ಪಿಂಟೊ ತಾಕೊಡೆ ಇವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

 

32. ಕೊಂಕಣಿ ಸಾಹಿತ್ಯ ಸಾಂಸ್ಕೃತಿಕ ಸಂಭ್ರಮ - ಧಾರವಾಡ

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಹಾಗೂ ಪ್ರಜ್ವಲ ಹವ್ಯಾಸಿ ಕನ್ನಡ, ಕೊಂಕಣಿ ಕಲಾ ಸಂಘದ ಆಶ್ರಯದಲ್ಲಿ ಧಾರವಾಡದ ಸಾಂಸ್ಕೃತಿಕ ಸಮುಚ್ಚಯ ಭವನದಲ್ಲಿ ದಿನಾಂಕ 22.02.2022 ರಂದು ಕೊಂಕಣಿ ಸಾಹಿತ್ಯ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವ ಡಾ ಸರಯು ಪ್ರಭು ಮಾತನಾಡಿ ಶಾಲೆ-ಕಾಲೇಜುಗಳಲ್ಲಿ ಕೊಂಕಣಿ ಭಾಷೆಗೆ ಮಾನ್ಯತೆ ದೊರೆಕಿದೆ. ಇದರ ಲಾಭವನ್ನು ಮುಕ್ಕಳು ಪಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಕೊಂಕಣಿ ಭಾಷಿಕ ಸಮುದಾಯದವರು ಗಮನ ಹರಿಸಬೇಕು ಎಂದರು. ಕರ್ನಾಟಕ ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ಸಂಯೋಜಕರಾದ ಡಾ ಉದಯ ರಾಯಕರ್‌ ಮಾತನಾಡಿ, ಅಧ್ಯಯನ ಫೀಠದ ಕಾರ್ಯವನ್ನು ಕೂಡಲೇ ಆರಂಭಿಸುವುದಾಗಿ ತಿಳಿಸಿದರು. ನಿವೃತ್ತ ಜಿಲ್ಲಾಧಿಕಾರಿ ಎಸ್.ವಿ ನಾಯ್ಕ ರಾಣೆ ಮಾತನಾಡಿದರು. ಆಕಾಶವಾಣಿಯಲ್ಲಿ ಕೊಂಕಣಿ ಪ್ರಸಾರ ಕುರಿತು ಅರುಣ ನಾಯಕ್‌ ಉಪನ್ಯಾಸ ನೀಡಿದರು. ಹಿರಿಯ ನಿವೃತ್ತ ಮುಖ್ಯಾಧ್ಯಾಪಕ ರಮಾಕಾಂತ ಮಹಾಲೆ ಅವರನ್ನು ಸನ್ಮಾನಿಸಲಾಯಿತು. ಗಜಾನನ ಕುಮಟಾಕರ, ಸಂತೋಷ ಮಹಾಲೆ ಇತರರು ಉಪಸ್ಥಿತರಿದ್ದರು. ಅಕಾಡೆಮಿಯ ಸದಸ್ಯ ಡಾ. ವಸಂತ ಬಾಂದೇಕರ್‌ ನಿರೂಪಿಸಿದರು, ಸುರೇಂದ್ರ ಪಾಲನಕರ್‌ ವಂದಿಸಿದರು. ನಂತರ ಬಹುಭಾಷಾ ಕವಿಗೋಷ್ಠಿ ಹಾಗೂ ಕೆ.ಡಿ ಮಹಾಲೆ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. 

 

33. ಕೊಂಕಣಿ ಸಾಹಿತ್ಯ ಸಾಂಸ್ಕೃತಿಕ ಸಂಭ್ರಮ - ಗಂಗಾವತಿ

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಹಾಗೂ ದೈವಜ್ಞ ಮಿತ್ರ ಮಂಡಳಿ ಮತ್ತು ಜಿ.ಎಸ್.ಬಿ ಸಮುದಾಯ ಗಂಗಾವತಿ ಇವರ ಆಶ್ರಯದಲ್ಲಿ ಕೊಂಕಣಿ ಸಾಹಿತ್ಯ ಸಾಂಸ್ಕೃತಿ ಸಂಗಮ ಕಾರ್ಯಕ್ರಮವು ದಿನಾಂಕ 24.02.2022 ರಂದು ಗಂಗಾವತಿಯ ಶ್ರೀ ಚೆನ್ನ ಬಸವೇಶ್ವರ ಸ್ವಾಮಿ ಕಲಾಮಂದಿರದಲ್ಲಿ ನಡೆಯಿತು. ಗಂಗಾವತಿಯ ಶಾಸಕರಾದ ‍ ಶ್ರೀ ಪರಣ್ಣ ಮುನವಳ್ಳಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಕಾಡೆಮಿಯ ಅಧ್ಯಕ್ಷರಾದ ಡಾ. ಕೆ ಜಗದೀಶ್‌ ಪೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕೊಂಕಣಿ ಬಾಷೆಯ ಪ್ರಸ್ತುತ ಸ್ಥಿತಿಗತಿ ಹಾಗೂ ಕೊಂಕಣಿ ಭಾಷೆಗಾಗಿ ಸೇವೆ ಸಲ್ಲಿಸಿದ ಮಹನೀಯರನ್ನು ಸ್ಮರಿಸಿದರು.  ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾದ ಶ್ರೀ ಅಶೋಕ ಕುಮಾರ ರಾಯ್ಕರ್‌, ಖ್ಯಾತ ಹಾಸ್ಯ ಕಲಾವಿದ ಶ್ರೀ ಗಂಗಾವತಿ ಪ್ರಾಣೇಶ, ಸಮಾಜ ಸೇವಕರಾದ ಶ್ರೀ ದುರ್ಗಾದಾಸ ಭಂಡಾರ್ಕರ್‌ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಆಧ್ಯಾತ್ಮ ಮತ್ತು ಕೊಂಕಣಿ ಲೋಕ ಕುರಿತಂತೆ ಶ್ರೀ ಶ್ರವಣಕುಮಾರ ರಾಯಕರ ಇವರು ಉಪನ್ಯಾಸ ಮಂಡನೆ ಮಾಡಿದರು. ‍ಶ್ರೀಮತಿ ಅನನ್ಯಾ ಅಭಿಷೇಕ ಇವರ ಅಧ್ಯಕ್ಷತೆಯಲ್ಲಿ ಬಹುಭಾಷಾ ಕವಿಗೋಷ್ಠಿ ನಡೆಯಿತು. ‍ಶ್ರೀ ಅಶೋಕ ರಾಯಕರ ಇವರ ʼಅಂಜನಾದ್ರಿʼ ಪುಸ್ತಕ ಲೋಕಾರ್ಪಣೆಗೊಂಡಿತು.  ಜ್ಞಾನೇಶ್ವರಿ ಮಹಿಳಾ ಮಂಡಳದ ಸದಸ್ಯರು ವಿವಿಧ ಕೊಂಕಣಿ ಸಾಂಸ್ಕೃತಿ ಕಲಾ ಪ್ರದರ್ಶನ ನೀಡಿದರು. ಅಕಾಡೆಮಿಯ ಸದಸ್ಯರಾದ ‍ಶ್ರಿ ಪ್ರಮೋದ್‌ ಶೇಟ್‌ ಇವರ ಸಂಚಾಲಕತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು.

 

34. ಕೊಂಕಣಿ ಸಾಹಿತ್ಯ ಸಾಂಸ್ಕೃತಿಕ ಸಂಭ್ರಮ - ಶಿರಸಿ

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಹಾಗೂ ಕೊಂಕಣಿ ಕಲಾ ಮಂಡಳ(ರಿ) ಶಿರಸಿ, ಇವರ ಸಹಯೋಗಲ್ಲಿ ಕೊಂಕಣಿ  ಸಾಹಿತ್ಯ ಸಾಂಸ್ಕೃತಿ ಸಂಗಮ ಕಾರ್ಯಕ್ರಮವು ದಿನಾಂಕ 25.02.2022 ರಂದು ಶಿರಸಿಯ ನೆಮ್ಮದಿ ಕುಟೀರದಲ್ಲಿ ನಡೆಯಿತು. ಸೇಂಟ್ ಅಂತೋನಿ ಚರ್ಚ್‌ನ ಧರ್ಮಗುರುಗಳಾದ ಫಾ| ಜಾನ್‌ ಫೆರ್ನಾಡಿಸ್‌ ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿ, ಕೊಂಕಣಿ ಭಾಷೆಯ ವಿಸ್ತಾರ ಜಾಸ್ತಿಯಿದ್ದು ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ. ಐದು ಭಾಷೆಗಳ ಲಿಪಿಗಳಲ್ಲಿ ಕೊಂಕಣಿಯನ್ನು ಬರೆಯುವುದರಿಂದ ಹಿಂದು, ಮುಸ್ಲಿಂ ಹಾಗೂ ಕ್ರೈಸ್ತ ಈ ಮೂರು ಧರ್ಮಗಳಿಗೂ ಈ ಭಾಷೆ ಪಸರಿಸಿದೆ ಎಂದರು. ಅಕಾಡೆಮಿಯ ಸದಸ್ಯರಾದ ಡಾ ವಸಂತ ಬಾಂದೇಕರ್‌ ಕಾರ್ಯಕ್ರಮದ ಸಂಚಾಲಕತ್ವ ವಹಿಸಿದ್ದರು. ‍‍ಶಿರಸಿ ನಗರ ಸಭೆಯ ಉಪಾಧ್ಯಕ್ಷರಾದ ‍ಶ್ರೀಮತಿ ವೀಣಾ ಶೆಟ್ಟಿ. ರಾಷ್ಟ್ರೀಯ ದೈವಜ್ಞ ಸಮಾಜೋನ್ನತಿ ಪರಿಷತ್‌ ಶಿರಸಿ ಇದರ ಉಪಾಧ್ಯಕ್ಷರಾದ ಶ್ರೀಮತಿ ಸಂಧ್ಯಾ ಕುರ್ಡೇಕರ್‌, ಲೋಕಮಿತ್ರ ಪೌಂಡೇಶನ್‌ನ ಅಧ್ಯಕ್ಷರಾದ ಶ್ರೀ ರಾಮು ಎಚ್.‌ ಕಿಣಿ, ಸಾಮಾಜಿಕ ಕಾರ್ಯಕರ್ತ ವಿ.ಪಿ ಹೆಗಡೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ವೇಳೆ ಸಾಧಕರಾದ ‍ಶ್ರೀ ಯೋಗೀಶ ಶಾನಭಾಗ ಯಲ್ಲಾಪುರ, ‍ಶ್ರೀಮತಿ ಶೈಲಜಾ ಮಂಗಳೂರು ಇವರನ್ನು ಗೌರವಿಸಲಾಯಿತು. ಶ್ರೀ ರಾಮಚಂದ್ರ ಪೈ ಹಾಗೂ ಪಂಗಡದವರು ಕೊಂಕಣಿ ಸಾಂಸ್ಕೃತಿ ಕಲಾ ಪ್ರದರ್ಶನ ನೀಡಿದರು.

 

35.ಕೊಂಕಣಿ ಇ-ಸಂವಹನ್‌ ಕೋರ್ಸ್‌ - ಸಮಾರೋಪ ಸಮಾರಂಭ

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಆನಿ ಸಂತ ಅಲೋಶಿಯಸ ಕಾಲೇಜು ಮಂಗಳೂರು ಇವರ ಸಹಯೋಗದಲ್ಲಿ ನಡೆದ  E-ಸಂವಹನ Conversational Konkani ಸರ್ಟಫೀಕೆಟ್ ಕೋರ್ಸ್‌ನ ಸಮಾರೋಪ ಸಮಾರಂಭವನ್ನು online ಮುಖಾಂತರ ದಿನಾಂಕ 25.02.2022 ರಂದು ನಡೆಸಲಾಯಿತು.

 

36. ಕೊಂಕಣಿ ಭವನದ ಶಿಲಾನ್ಯಾಸ ಸಮಾರಂಭ

ಮಂಗಳೂರು ನಗರದ ಉರ್ವಸ್ಟೋರ್ ಬಳಿ ನಿರ್ಮಾಣ ಅಗಲಿರುವ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ ಉದ್ದೇಶಿತ ಭವನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪಿ.ಸುನಿಲ್‌ ಕುಮಾರ್‌ ಇವರು ದಿನಾಂಕ 26.02.2022 ರಂದು ಶಿಲಾನ್ಯಾಸ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, `ಕೊಂಕಣಿ ಭಾಷಿಗರ ಹಲವು ವರ್ಷಗಳ ಬೇಡಿಕೆ ಈಗ ಈಡೇರುತ್ತಿದೆ. ಮುಂಬರುವ ದಿನಗಳಲ್ಲಿ ಭವನದ ಮೂಲ ಸೌಕರ್ಯಗಳ ವೃದ್ಧಿಗೆ ಮತ್ತಷ್ಟು ಅನುದಾನ ನೀಡಲಾಗುವುದು, ತುಳು, ಬ್ಯಾರಿ, ಕೊಂಕಣಿ ಅಕಾಡೆಮಿಗಳಿಗೆ ಶಕ್ತಿ ತುಂಬುವ ಕೆಲಸವನ್ನು ಸರ್ಕಾರದಿಂದ ಮಾಡಲಾಗುತ್ತಿದೆ' ಎಂದರು. ಭಾಷೆ ಹಾಗೂ ಸಂಸ್ಕೃತಿ, ನಡವಳಿಕ ನಾಗರಿಕತೆ ಒಂದಕ್ಕೊಂದು ಕೊಂಡಿಯಾಗಿ ಇದ್ದುಕೊಂಡು ಕೆಲಸ ಮಾಡಬೇಕು. ಹಾಗಾದಾಗ ನಾಗರಿಕ ಸಮಾಜ ಚೆನ್ನಾಗಿ ನಡೆಯುತ್ತದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕೊಂಕಣಿ ಮಾತನಾಡುವ ಭಾಷಿಗರ ಸಂಖ್ಯೆ ದೊಡ್ಡದಿದೆ. ಆ ಭಾಷಿಗರನ್ನು ಸಾಹಿತ್ಯ ಹಾಗೂ ಇತರ ಚಟುವಟಿಕೆಗಳ ಮೂಲಕ ಒಟ್ಟು ಗೂಡಿಸುವ ಕೆಲಸವಾಗಬೇಕಾದರೆ ಅಕಾಡೆಮಿಗೊಂಡು ಸ್ವಂತ ಕಚೇರಿ ಅಗತ್ಯವಿದೆ. ಅದಕ್ಕೆ ಪೂರಕವಾಗಿ ಭವನ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು. ಅಕಾಡೆಮಿಯ ಅಧ್ಯಕ್ಷ ಡಾ. ಕೆ.ಜಗದೀಶ್ ಪೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕರಾದ ಡಿ. ವೇದವ್ಯಾಸ ಕಾಮತ್‌, ವಿಧಾನ ಪರಿಷತ್‌ ಸದಸ್ಯ ಪ್ರತಾಪ್ ಸಿಂಹ ನಾಯಕ್, ಮೇಯರ್‌ ಪ್ರೇಮಾನಂದ ಶೆಟ್ಟಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ದಯಾನಂದ ಕತ್ತಲ್‌ಸಾರ್, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ಕಜೆಗದ್ದೆ, ಪಾಲಿಕೆ ಸದಸ್ಯರಾದ ಗಣೇಶ್ ಕುಲಾಲ್, ಜಯಶ್ರೀ, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್‌, ರಿಜಿಸ್ಟ್ರಾರ್‌ ಆರ್.‌ ಮನೋಹರ್‌ ಕಾಮತ್‌, ಅಕಾಡೆಮಿ ಸದಸ್ಯರು ಉಪಸ್ಥಿತರಿದ್ದರು.  ಅಕಾಡೆಮಿ ಸದಸ್ಯರಾದ ಕೆನ್ಯೂಟ್‌ ಜೀವನ್ ಪಿಂಟೊ ಸ್ವಾಗತಿಸಿದರು. ನವೀನ್ ನಾಯಕ್ ವಂದಿಸಿದರು. ಸಾಣೂರು ನರಸಿಂಹ ಕಾಮತ್ ‌ ಕಾರ್ಯಕ್ರಮ ನಿರೂಪಿಸಿದರು.

 

37. ಚುಟುಕಾಂ - ಚುಟ್ಕುಲೆ

ಅಕಾಡೆಮಿಯು ಆನ್‌ಲೈನ್‌ ಕಾರ್ಯಕ್ರಮಗಳ ಮೂಲಕ ಕಾರ್ಯಕ್ರಮಗಳನ್ನು ನಡೆಸುವ ವಿಶೇಷ ಯೋಜನೆಯನ್ನು ಹಮ್ಮಿಕೊಂಡಿದ್ದು, ಈ ಯೋಜನೆಯಡಿ ದಿನಾಂಕ 26.02.2022 ರಂದು "ಚುಟುಕಾಂ - ಚುಟ್ಕುಲೆ"  ಹಾಸ್ಯ ಕವಿತೆ ಮತ್ತು ಹಾಸ್ಯ ಕಥೆ ಕಾರ್ಯಕ್ರಮ ಸಿಕ್ವೇರಾ ಮ್ಯಾನ್ಶನ್‌, ಕಟ್ಲಾ, ಸುರತ್ಕಲ್‌ ಇಲ್ಲಿ ನಡೆಯಿತು. ಕೊಂಕಣಿ ಸಾಹಿತಿ ಮತ್ತು ಕಲಾಕಾರರ ಸಂಘಟನೆ(ರಿ) ಇವರ ಸಯೋಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕವಿ ಹಾಗೂ ಕತೆಗಾರರಾದ ಶ್ರೀ ಶಿಕೇರಾಮ್‌ ಸುರತ್ಕಲ್‌ ರವರ ಅಧ್ಯಕ್ಷತೆಯಲ್ಲಿ ನಡೆದ ಈ ಕವಿಗೋಷ್ಠಿಯಲ್ಲಿ ಕವಿಗಳಾದ, ‍ಶ್ರೀ ನವೀನ್‌ ಕುಲ್ಶೇಕರ್‌, ‍‍ಶ್ರೀಮತಿ ಜ್ಯೂಲಿಯೆಟ್‌ ಮೊರಾಸ್‌, ‍ಶ್ರೀ ಜೋರ್ಜ್ ಲಿಗೋರಿ, ‍ಶ್ರೀ ನವೀನ್‌ ಪಿರೇರಾ, ಅಲ್ಪೊನ್ಸ್‌ ಡಿಸೋಜಾ, ಶ್ರೀ ಆಲ್ವಿನ್‌ ದಾಂತಿ, ಶ್ರೀ ರಿಚ್ಚಿ ಪಿರೇರಾ, ಶ್ರೀಮತಿ ಫೆಲ್ಸಿ ಲೋಬೊ, ಶ್ರೀ ರೋಬರ್ಟ್‌ ಡಿಸೋಜಾ ಕವನ ವಾಚನ ಮಾಡಿದರು. ಅಕಾಡೆಮಿಯ ಅಧ್ಯಕ್ಷರಾದ ಡಾ. ಕೆ ಜಗದೀಶ್‌ ಪೈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.

 

38. ಪೊಯೆಟಿಕಾ ಕವಿಗೋಷ್ಠಿ -3

ಅಕಾಡೆಮಿ ಹಾಗೂ ಪೊಯೆಟಿಕಾ ಕವಿಂಚೊ ಪಂಗಡ್‌ ಇವರ ಸಹಭಾಗಿತ್ವದೊಂದಿಗೆ ಆಯೋಜಿಸಿದ "ಪೊಯೆಟಿಕಾ ಕವಿಗೋಷ್ಠಿ-3" ಕಾರ್ಯಕ್ರಮ ದಿನಾಂಕ 27.02.2022 ರಂದು ಸಂಜೆ 4.00 ಗಂಟೆಗೆ ಪಿಂಟೊಗಾರ್ಡನ್‌, ಕಿನ್ನಿಗೋಳಿ ಇಲ್ಲಿ ನಡೆಯಿತು. ಡಾ. ಜೋಯರ್‌ ಕಿನ್ನಿಗೋಳಿ ಈ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದರು. ಕವಿಗಳಾದ ‍ಶ್ರೀ ಜೋಸ್ಸಿ ಪಿಂಟೊ, ಶ್ರೀ ಜಿಯೋ, ಅಗ್ರಾರ್‌, ಜೀವ್‌, ನಿಡ್ಡೋಡಿ, ಶ್ರೀಮತಿ ಪ್ರಮೀಳಾ ಪ್ಲಾವಿಯಾ, ಶ್ರೀಮತಿ ಪ್ರೀತಾ ಮಿರಾಂದಾ, ಶ್ರೀ ನವೀನ್‌ ಪಿರೇರಾ, ಕು| ಮುದ್ದು ತೀರ್ಥಹಳ್ಳಿ, ‍ಶ್ರೀ ಪೀತಮ್‌ ಕಿರೆಂ, ಕು| ಪ್ರತಿಮಾ ಕ್ಲಾರಾ, ಶ್ರೀಮತಿ ಪ್ಲಾವಿಯಾ ಅಲ್ಬುಕರ್ಕ್, ‍ಶ್ರೀ ಪೇದ್ರು ಪ್ರಭು, ‍ಶ್ರೀ ಹೇಮಾಚಾರ್ಯ, ಶ್ರೀ ಲ್ಯಾನ್ಸೀ ಸಿಕ್ವೇರಾ, ಶ್ರೀಮತಿ ಜೋಯ್ಸ್‌ ಪಿಂಟೊ, ಶ್ರೀ ಲಾಯ್ಡ್‌ ರೇಗೊ, ಶ್ರೀ ವಿಲ್ಫ್ರೆಡ್‌ ಲೋಬೊ, ಶ್ರೀಮತಿ ಸಲೋಮಿ, ‍ಶ್ರೀ ಆಲ್ವಿ ಪೆರ್ನಾಲ್‌, ಶ್ರೀಮತಿ ಲವಿಟಾ, ‍ಶ್ರೀಮತಿ ಲವಿ ಗಂಜಿಮಠ, ‍ಶ್ರೀ ಹೆನ್ರಿ ಮಸ್ಕರೇನಸ್‌, ಶ್ರೀಮತಿ ಜೆನೆಟ್‌ ವಾಸ್‌, ‍ಶ್ರೀ ರೋನಿ ಕ್ರಾಸ್ತಾ, ‍ಶ್ರೀ ಜೋರ್ಜ್‌ ಲಿಗೋರಿ ಡಿಸೋಜಾ ತಮ್ಮ ಕವನ ಮಂಡಿಸಿದರು. ಡಾ ಪ್ಲಾವಿಯಾ ಕ್ಯಾಸ್ತಲಿನೊ ಕಾರ್ಯಕ್ರಮ ನಿರೂಪಿಸಿದರು. ಸದಸ್ಯರಾದ ಶ್ರೀ ಕೆನ್ಯೂಟ್‌ ಜೀವನ್‌ ಪಿಂಟೊ ಸಂಚಾಲಕತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅಕಾಡೆಮಿಯ ರಿಜಿಸ್ಟ್ರಾರ್ ಶ್ರೀ ಆರ್.‌ ಮನೋಹರ್‌ ಕಾಮತ್‌ ಉಪಸ್ಥಿತರಿದ್ದರು.

 

39. ಕೊಂಕಣಿ ಸಾಹಿತ್ಯ ಅಕಾಡೆಮಿ ಕಚೇರಿಗೆ-‌ ದಾಮೋದರ್‌ ಮೌಝೊ ಭೇಟಿ

     19 ಮಾರ್ಚ್‌ 2022 ರಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಕಚೇರಿಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕತ ಕೊಂಕಣಿ ಲೇಖಕ ದಾಮೋದರ್‌ ಮೌಝೊ ಭೇಟಿ ನೀಡಿದರು. ಅಕಾಡೆಮಿಯ ಅಧ್ಯಕ್ಷರು ಇವರನ್ನು ಹೂಗುಚ್ಚ ನೀಡಿ ಸ್ವಾಗತಿಸಿದರು. ಕೊಂಕಣಿ ಅಕಾಡೆಮಿ ಪ್ರಥಮ ಬೇಟಿ ನೀಡಿದ ಇವರು ಕೊಂಕಣಿ ಅಕಾಡೆಮಿಯ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ಪಡೆದರು. ಅಕಾಡೆಮಿಯ ನೂತನ ಕೊಂಕಣಿ ಭವನ ನಿರ್ಮಾಣದ ಕಾಮಗಾರಿಯನ್ನು ವೀಕ್ಷಿಸಿದರು.  ಅಕಾಡೆಮಿಯ ಸದಸ್ಯರಾದ ‍ಶ್ರೀ ಗುರುಮೂರ್ತಿ ವಿ.ಎಸ್,‌ ಶ್ರೀ ಅರುಣ್ ಜಿ. ಶೇಟ್, ಡಾ. ವಸಂತ ಬಾಂದೆಕರ್‌ ಹಾಗೂ  ಶ್ರೀ ಸುರೇಂದ್ರ ಪಾಲನಕರ್  ಉಪಸ್ಥಿತರಿದ್ದರು.  

 

40. ಲಿಟ್‌ ಫೆಸ್ಟ್-2022

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಹಾಗೂ ಕೊಂಕಣಿ ಭಾಸ್‌ ಆನಿ ಸಂಸ್ಕೃತಿ ಪ್ರತಿಷ್ಠಾನ ಮಂಗಳೂರು  ಇವರ ಸಹಯೋದಲ್ಲಿ ದಿನಾಂಕ 19 ಹಾಗೂ 20 ಮಾರ್ಚ್‌ 2022 ರಂದು ವಿಶ್ವ ಕೊಂಕಣಿ ಕೇಂದ್ರದಲ್ಲಿ "ಲಿಟ್‌ ಫೆಸ್ಟ್‌ 2022" ಕಾರ್ಯಕ್ರಮವನ್ನು ನಡೆಸಲಾಯಿತು. ದಿನಾಂಕ 19.03.2022 ರಂದು ಮಧ್ಯಹ್ನ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೊಂಕಣಿ ಸಾಹಿತಿ ಶ್ರೀ ದಾಮೋದರ್‌ ಮೌಝೊ ಅವರೊಂದಿಗೆ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಆರ್ಸೊ ಪತ್ರಿಕೆಯ ಸಂಪಾದಕರಾದ ‍ಶ್ರೀ ಎಚ್ಚೆಮ್‌ ಪರ್ನಾಲ್‌ ಈ ಸಂದರ್ಶನ ಕಾರ್ಯವನ್ನು ನಡೆಸಿಕೊಟ್ಟರು. ಈ ಸಂವಾದದಲ್ಲಿ ಕೊಂಕಣಿ ಭಾಷೆ ಸಾಹಿತ್ಯ ಕುರಿತಂತೆ ಸಭಿಕರೊಂದಿಗೆ ಮುಕ್ತ ಚರ್ಚೆ ನಡೆಯಿತು. ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅಕಾಡೆಮಿಯ ಅ‍ಧ್ಯಕ್ಷರು ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಎರಡು ದಿನಗಳ ಈ ಕಾರ್ಯಕ್ರಮದಲ್ಲಿ ಜರುಗಿದ ಸಂವಾದ ಕಾರ್ಯಗಳು :

  • ಡಾ ದೇವದಾಪೈ ಇವರ ಮಧ್ಯಸ್ತಿಕೆಯಲ್ಲಿ ಶಾಳೆಂತು ಕೊಂಕಣಿ : ಸ್ಥತಿಗತಿ ಆನಿ ಪುಡಾರ್‌,

ಸಂವಾದಲ್ಲಿ ಭಾಗವಹಿಸಿದವರು : ಡಾ.ಕೆ ಮೋಹನ್‌ ಪೈ, ‍ಶ್ರೀಮತಿ ಪೆಲ್ಸಿ ಲೋಬೊ, ಡಾ ವಿಜಯಲಕ್ಷ್ಮೀ ನಾಯಕ್‌, ಶ್ರೀಮತಿ ತಾರಾ ಲವೀನಾ ಫೆರ್ನಾಂಡಿಸ್‌, ಡಾ ಜಯವಂತ ನಾಯಕ್, ಡಾ ವಾರಿಜಾ ಎನ್

  • ಶ್ರೀ ನಾಗೇಂದ್ರ ಶೆಣೈ ಇವರ ಮಧ್ಯಸ್ತಿಕೆಯಲ್ಲಿ ಡಿಜಿಟಲ್‌ ಮಾಧ್ಯಮಾಂತು ಕೊಂಕಣಿ

ಸಂವಾದಲ್ಲಿ ಭಾಗವಹಿಸಿದವರು: ಶ್ರೀ ಸುಧಾಕರ್‌ ಕೊಟಾನ್‌, ಶ್ರೀ ರೈಮಂಡ್‌ ಡಿಕುನ್ಹಾ, ಶ್ರೀ ಸ್ಟ್ಯಾನಿ ಡಿಸೋಜಾ, ಶ್ರೀ ವಲ್ಲಿ ಕ್ವಾಡ್ರಸ್‌, ಶ್ರೀಮತಿ ಸ್ನೇಹಾ ಪೈ, ಪಾ| ಡಾ ಮೆಲ್ವಿನ್‌ ಪಿಂಟೊ.

  • ಶ್ರೀಮತಿ ಶಕುಂತಲಾ ಆರ್‌ ಕಿಣಿ ಇವರ ಮಧ್ಯಸ್ತಿಕೆಯಲ್ಲಿ ಅಮ್ಚಿ ವಾಸರಿ : ಜಾಗತೀಕರಣಾಚಿ ಸಾವಾಲಂ

ಸಂವಾದಲ್ಲಿ ಭಾಗವಹಿಸಿದವರು: ಶ್ರೀಮತಿ ಪ್ಲೋರಿನ್‌ ರೋಚ್‌, ಶ್ರೀಮತಿ ಗೀತಾ ವಾಗ್ಲೆ, ಡಾ ನಂದಾ ಜೆ ಪೈ, ಶ್ರೀಮತಿ ಸುಮತಿ ಪೈ, ಶ್ರೀಮತಿ ಸುಚೇತಾ ನಾಯಕ್‌, ಶ್ರೀಮತಿ ಗೀತಾ ಸಿ ಕಿಣಿ,

  • ಶ್ರೀ ಮೋಹನ್‌ ದಾಸ್‌ ಪ್ರಭು ಇವರ ಮಧ್ಯಸ್ತಿಕೆಯಲ್ಲಿ ಕೊಂಕಣಿ ರಂಗಭೂಮಿ ಆನಿ ಸಿನೆಮಾ- ಸ್ಥಿತ್ಯಂತರ್‌

ಸಂವಾದಲ್ಲಿ ಭಾಗವಹಿಸಿದವರು: ಶ್ರೀಮತಿ ಪೂರ್ಣಿಮಾ ಸುರೇಶ್‌ ನಾಯಕ್‌, ಶ್ರೀ ಪ್ರಕಾಶ್‌ ಶೆಣೈ, ಶ್ರೀ ನಿತ್ಯಾನಂದ ಪೈ, ಶ್ರೀ ಅರುಣ್‌ ಖಾರ್ವಿ, ಶ್ರೀ ಕೆ ಅಕ್ಷಯ್ ನಾಯಕ್‌, ಶ್ರೀ ಎಡ್ಡಿ ಸಿಕ್ವೇರಾ.

  • ಶ್ರೀ ಅರುಣ್‌ ಜಿ ಶೇಟ್‌ ಇವರ ಮಧ್ಯಸ್ತಿಕೆಯಲ್ಲಿ ಕೊಂಕಣಿಕ ಕುಲವೃತ್ತಿ ಆನಿ ಆಹ್ವಾನಾಂ

ಸಂವಾದಲ್ಲಿ ಭಾಗವಹಿಸಿದವರು: ಶ್ರೀ ಪ್ರವೀಣ್‌ ನಾಯಕ್‌, ಶ್ರೀ ಪ್ರಶಾಂತ್‌ ಆರ್‌ ದೈವಜ್ಞ, ಶ್ರೀ ಮಹೇಶ್‌ ನಾಯಕ್‌ ಚಾರೋಡಿ, ಶ್ರೀ ಸುರೇಶ್‌ ಬಾಳಿಗಾ, ಶ್ರೀ ಅಶೋಕ್‌ ಕಾಸರಕೋಡು, ಶ್ರೀ ನಾಗರಾಜ ಖಾರ್ವಿ

ಕಾರ್ಯಕ್ರಮದಲ್ಲಿ  ಅಕಾಡೆಮಿಯ ಸದಸ್ಯರಾದ ಶ್ರೀ ನವೀನ್‌ ನಾಯಕ್‌, ಶ್ರೀ ಕೆನ್ಯೂಟ್‌ ಜೀವನ್‌ ಪಿಂಟೊ, ಡಾ ವಸಂತ್‌ ಬಾಂದೇಕರ್‌, ಶ್ರೀ ನರಸಿಂಹ ಕಾಮತ್‌, ಶ್ರೀ ಸುರೇಂದ್ರ ವಿ ಪಾಲನಕರ್‌, ಶ್ರೀ ಅರುಣ್‌ ಜಿ ಶೇಟ್‌, ಶ್ರೀ ಗೋಪಾಲಕೃಷ್ಣ ಭಟ್‌, ಶ್ರೀ ಗುರುಮೂರ್ತಿ ವಿ ಶೇಟ್‌, ಶ್ರೀಮತಿ ಪೂರ್ಣಿಮಾ ಸುರೇಶ್‌ ನಾಯಕ್‌ ಉಪಸ್ಥಿತರಿದ್ದರು.

 

41. ಪೊಯೆಟಿಕಾ ಕವಿಗಷ್ಠಿ - 4

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಹಾಗೂ ಪೊಯೆಟಿಕಾ ಕವಿಂಚೊ ಪಂಗಡ್‌ ಇವರ ಸಹಯೋಗದಲ್ಲಿ ಆಯೋಜಿಸಿದ ಪೊಯೆಟಿಕಾ ಕವಿಗೋಷ್ಠಿ -4 ದಿನಾಂಕ 20.03.2022 ರಂದು ಜಿಯೊ ಅಗ್ರಾರ್‌ ಇವರ ಮನೆಯಂಗಳದಲ್ಲಿ ನಡೆಯಿತು. ಶ್ರೀಮತಿ ಫೆಲ್ಸಿ ಲೋಬೊ ಇವರ ಸಂಚಾಲಕತ್ವದಲ್ಲಿ ನಡೆದ ಈ ಕವಿಗೋಷ್ಠಿಯಲ್ಲಿ‌ ಶ್ರೀ ಜೊಸ್ಸಿಪಿಂಟೊ, ಶ್ರೀ ಪಂಜು ಬಂಟ್ವಾಳ್‌, ಶ್ರೀ ಜಿಯೋ ಅಗ್ರಾರ್‌, ಶ್ರೀ ಮಚ್ಚಾ ಮಿಲಾರ್‌, ಶ್ರೀ ಜೀವ್‌ ನಿಡ್ಡೋಡಿ, ಶ್ರೀಮತಿ ಪ್ರಮೀಳಾ ಪ್ಲಾವಿಯಾ ಕಾರ್ಕೊಳ್‌, ಶ್ರೀಮತಿ ಲವಿ ಗಂಜಿಮಠ, ಶ್ರೀ ನವೀನ್‌ ಪಿರೇರಾ, ಕು| ಮುದ್ದು ತೀರ್ಥ ಹ‍‍ಳ್ಳಿ, ಶ್ರೀ ರಿಚರ್ಡ ಲಸ್ರಾದೊ, ಶ್ರೀಮತಿ ಜೋಯ್ಸ್‌ ಪಿಂಟೊ, ಶ್ರೀಮತಿ ಪ್ಲಾವಿಯಾ ಅಲ್ಬುಕರ್ಕ್‌, ಶ್ರೀ ಪೇದ್ರು ಪ್ರಭು, ಶ್ರೀ ರೇಮಂಡ್‌ ಡಿಕುನ್ಹಾ, ಶ್ರೀ ಮಾವ್ರಿಸ್‌ ಶಾಂತಿಪುರ, ಶ್ರೀ ಲ್ಯಾನ್ಸಿ ಸಿಕ್ವೇರಾ, ಶ್ರೀ ಟಾಯ್ಟಸ್‌ ನೊರನ್ಹಾ, ಡಾ ಜೊಯರ್‌ ಕಿನ್ನಿಗೋಳಿ, ಶ್ರೀ ಲೋಯ್ಡ್‌ ರೇಗೊ, ಶ್ರೀ ವಿಲ್ಪ್ರೆಡ್‌ ರೇಗೊ, ಶ್ರೀಮತಿ ಸುಲೋಮಿ ಮಿಯಾಪದವು, ಶ್ರೀ ಆಲ್ವಿ ಫೆರ್ನಾಲ್‌, ‍ಶ್ರೀಮತಿ ಲವಿಟಾ ಲಸ್ರಾದೊ, ಶ್ರೀ ಎಡ್ವರ್ಡ್‌ ಲೋಬೊ, ಶ್ರೀ ಹೆನ್ರಿ ಮಸ್ಕರೇನಸ್‌, ‍ಶ್ರೀಮತಿ ಜೆನೆಟ್‌ ವಾಸ್‌, ಶ್ರೀ ವಿನೋದ್‌ ಪಿಂಟೊ ಹಾಗೂ ಶ್ರೀ ರಾಯನ್‌ ಮಿರಾಂದ ಕವಿತಾ ವಾಚನ ನಡೆಸಿದರು.

 

42. ಗೌರವ ಪ್ರಶಸ್ತಿ - ಪುಸ್ತಕ ಪುರಸ್ಕಾರ 2021

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ 2021 ನೇ ಸಾಲಿನ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಪುರಸ್ಕಾರ ಪ್ರದಾನ ಸಮಾರಂಭ ದಿನಾಂಕ 27.03.2022 ರಂದು ಕುಮಟಾದ ಮಹಾಲಸಾ ನಾರಾಯಣಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಕುಮಟಾ ವಿಧಾನ ಸಭಾಕ್ಷೇತ್ರ ಶಾಸಕರಾದ ಶ್ರೀ ದಿನಕರ ಶೆಟ್ಟಿ ಮಾತನಾಡಿ ಕೇರಳ ಹಾಗೂ ತಮಿಳುನಾಡಿನಲ್ಲಿ ಸಕಲ ಭಾಷಿಕರು ವಾಸವಾಗಿದ್ದರೂ ಅವರೆಲ್ಲರೂ ತಮ್ಮ ರಾಜ್ಯದ ಭಾಷೆಯಲ್ಲಿ ಮಾತನಾಡುತ್ತಾರೆ ಕರ್ನಾಟಕದಲ್ಲಿಯೂ ಸಕಲ ಭಾಷಿಕರಿದ್ದರೂ ಅವರು ತಮ್ಮ ರಾಜ್ಯದ ಭಾಷೆಯೊಂದಿಗೆ ಸೌಹಾರ್ಧಯುತ ಸಂಬಂದವನ್ನು ಬೆಳೆಸಿಕೊಂಡು, ತಮ್ಮ ಮಾತೃಭಾಷೆಗೂ, ನಾಡ ಬಾಷೆಗೂ ಸಮಾನ ಸ್ಥಾನ ನೀಡಿದ್ದಾರೆ, ಕೊಂಕಣಿ ಭಾಷೆ ಮಾತನಾಡುವರೆಲ್ಲರೂ ಒಂದಾದಾಗ ಈ ಭಾಷೆ ಇನ್ನಷ್ಟು ಬೆಳೆಯಲು ಸಾಧ್ಯ ಎಂದರು.  ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ಕೊಂಕಣಿ ಭಾಷೆಗೆ ಶಿಸ್ತು ಬದ್ದತೆ ಹಾಗೂ ಭಾವುಕತೆ ತುಂಬುವ ಮೂಲಕ ಆ ಭಾಷಿಕರು ಶಕ್ತಿ ನೀಡಿದ್ದಾರೆ. ಇಂದಿನ ಕರಾವಳಿ ಭಾಗದ ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳು, ರಾಷ್ಟ್ರೀಯ ಹೆದ್ದಾರಿ, ರೈಲು ಮಾರ್ಗ ಮುಂತಾದ ಎಲ್ಲಾ ಸೌಲಭ್ಯ ಮತ್ತು ಅಭಿವೃದ್ಧಿ ಕೊಂಕಣಿ ಭಾಷೆ ಮಾತನಾಡುವ ಜನರ ನೂರು ವರ್ಷದ ಕನಸಿನ ಸಾಧನೆ ಎಂದರು ಹಾಗೂ ಅನನ್ಯ ಸೇವೆ ಸಲ್ಲಿಸಿದ ಕೊಂಕಣಿಗರನ್ನು ಸ್ಮರಿಸಿದರು. 2021 ರ ಗೌರವ ಪ್ರಶಸ್ತಿಗೆ ಭಾಜನರಾಗಿರುವ ಶ್ರೀ ನಾಗೇಶ್‌ ಅಣ್ವೇಕರ್‌(ಕೊಂಕಣಿ ಸಾಹಿತ್ಯ), ಶ್ರೀ ಮಾಧವ ಖಾರ್ವಿ ( ಕೊಂಕಣಿ ಜಾನಪದ) ಶ್ರೀ ದಿನೇಶ್‌ ಪ್ರಭು ಕಲ್ಲೊಟ್ಟೆ (ಕೊಂಕಣಿ ಕಲೆ) ಇವರಿಗೆ ಹಾಗೂ ಪುಸ್ತಕ ಬಹುಮಾನ ಪಡೆದ ಕೊಂಕಣಿ ಕವನ ಪುಸ್ತಕ ಲ್ಹಾರಾಂಚೆಂ ಗೀತ್‌ ಇದರ ಲೇಖಕರಾದ ಫಾ| ಜೆವಿನ್‌ ಸಿಕೇರ್‌, ಕೊಂಕಣಿ ಸಣ್ಣ ಕತೆ ಪುಸ್ತಕ ಲವ್‌ಲೆಟರ್ಸ್‌ ವ್ಹಾಜ್ಜಿತಾಲೊ ಮಾಂತಾರೊ ಇದರ ಲೇಖರರಾದ ಶ್ರೀ ಗೋಪಾಲಕೃಷ್ಣ ಪೈ, ಲೇಖನ ಪುಸ್ತಕ ರುಪಾಂ ಆನಿ ರೂಪಕಾಂ ಇದರ ಲೇಖಕರಾದ ‍ಶ್ರೀ ಎಚ್ಚೆಮ್‌ ಪೆರ್ನಾಲ್‌ ಇವರಿಗೆ ಶಾಸಕ ದಿನಕರ ಶೆಟ್ಟಿ ಪ್ರಶಸ್ತಿ ಪ್ರಧಾನ ಮಾಡಿದರು. ಅಕಾಡೆಮಿಯ ಅಧ್ಯಕ್ಷರಾದ ಡಾ ಕೆ ಜಗದೀಶ್‌ ಪೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮಲ್ಲಿ ಅಕಾಡೆಮಿ ರಿಜಿಸ್ಟ್ರಾರ್‌ ಆರ್.‌ ಮನೋಹರ್‌ ಕಾಮತ್‌ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಸದಸ್ಯ ಸಂಚಾಲಕರಾದ ಶ್ರೀ ಚಿದಾನಂದ ಭಂಡಾರಿ ಸ್ವಾಗತಿಸಿದರು, ಶ್ರೀ ಗೋಪಾಲಕೃಷ್ಣ ಭಟ್‌ ಹಾಗೂ ಶ್ರೀಮತಿ ಪೂರ್ಣಿಮಾ ಸುರೇಶ್‌ ನಾಯಕ್‌ ಕಾರ್ಯಕ್ರಮ ನಿರೂಪಿಸಿದರು.

 

ಇತ್ತೀಚಿನ ನವೀಕರಣ​ : 02-11-2022 12:52 PM ಅನುಮೋದಕರು: Karnataka Konkani Sahitya Academy



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080