ಅಭಿಪ್ರಾಯ / ಸಲಹೆಗಳು

2020-21 ರ ಕಾರ್ಯಕ್ರಮಗಳು

 

1.ಕೊಂಕಣಿ ಮಾನ್ಯತಾ ದಿನಾಚರಣೆ

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಕೊಂಕಣಿ ಭಾಷೆಗೆ ಸಾಂವಿಧಾನಿಕ ಮಾನ್ಯತೆ ದೊರೆತೆ ಸವಿನೆನಪಿಗಾಗಿ “ಕೊಂಕಣಿ ಮಾನ್ಯತಾ ದಿನಾಚರಣೆ” ಕಾರ್ಯಕ್ರಮವನ್ನು ನಗರದ ಉರ್ವಾ, ದೈವಜ್ಞ ಕಲ್ಯಾಣ ಮಂಟಪದಲ್ಲಿ  ದಿನಾಂಕ 20.08.2020 ರಂದು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀ ಪ್ರತಾಪ ಸಿಂಹ ನಾಯಕ್, ಶ್ರೀ ಶಾಂತರಾಮ ಸಿದ್ದಿ, ದೈವಜ್ಞ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಶ್ರೀ ಸುಧಾಕರ ಶೇಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅಕಾಡೆಮಿಯ ಅಧ್ಯಕ್ಷರಾ ಡಾ ಜಗದೀಶ್ ಪೈ ಸ್ವಾಗತಿಸಿ ಪ್ರಾಸ್ತಾವಿಕ ಕೊಂಕಣಿ ಭಾಷೆಯ ಉಗಮ, ಬೆಳೆದು ಬಂದ ದಾರಿ, ಪ್ರಸ್ತುತ ಸ್ಥಿತಿ ಗತಿಗಳ ಕುರಿತು ಮಾತುಗಳನ್ನಾಡಿದರು . ಸದಸ್ಯರಾದ ಶ್ರೀ ನವೀನ್ ನಾಯಕ್ ವಂದಿಸಿದರು. ಸದಸ್ಯರಾದ ಶ್ರೀಮತಿ ಪೂರ್ಣಿಮಾ ಸುರೇಶ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀ ಪ್ರತಾಪ ಸಿಂಹ ನಾಯಕ್ ಹಾಗೂ  ಶ್ರೀ ಶಾಂತರಾಮ ಸಿದ್ದಿಯವರನ್ನು ಗೌರವಿಸಲಾಯಿತು. 2019 ನೇ ಸಾಲಿನ ಕೊಂಕಣಿ ಅಧ್ಯಯನ ವಿಭಾಗದಲ್ಲಿ ಡಾ ಪಿಯುಸ್ ಫಿದಲಿಸ್ ಪಿಂಟೊ ಇವರಿಗೆ ಪುಸ್ತಕ ಪುರಸ್ಕಾರ ನೀಡಿ ಗೌರವಿಸಲಾಯಿತು. ವಿವಿಧ ಸಾಂಸ್ಕೃತಿಕ ವಿನೋದಾವಳಿಗಳನ್ನು ನಡೆಸಲಾಯಿತು.  ಕಾರ್ಯಕ್ರಮದಲ್ಲಿ ಅಕಾಡೆಮಿ ರಿಜಿಸ್ಟ್ರಾರ್ ಕುಮಾರ್ ಬಾಬು ಬೆಕ್ಕೇರಿ, ಸದಸ್ಯರಾದ ಅರುಣ್ ಜಿ ಶೇಟ್, ಕೆನ್ಯೂಟ್ ಜೀವನ್ ಪಿಂಟೊ, ನರಸಿಂಹ ಕಾಮತ್ ಹಾಗೂ ಗೋಪಾಲಕೃಷ್ಣ ಭಟ್ ಉಪಸ್ಥಿತರಿದ್ದರು. ನಮ್ಮ ಕುಡ್ಲ ವಾಹಿನಿಯಲ್ಲಿ ಕಾರ್ಯಕ್ರಮದ ನೇರ ಪ್ರಸಾರ ಆಯೋಜಿಸಲಾಗಿತ್ತು.

2.ಕೊಂಕಣಿ ಮಾನ್ಯತಾ ದಿವಸ್‌ 2020

ಕೊಂಕಣಿ ಮಾನ್ಯತಾ ದಿನಾಚರಣೆಯ ದ್ವಿತೀಯ ಕಾರ್ಯಕ್ರಮವನ್ನು ಅಕಾಡೆಮಿ ಸದಸ್ಯರಾದ ಶ್ರಿಚಿದಾನಂದಭಂಡಾರಿಯವರ ಸಂಚಾಲಕತ್ವದಲ್ಲಿ ಕುಮಟಾದ ನಾದಶ್ರೀಕಲಾ ಕೇಂದ್ರ ಭವನದಲ್ಲಿ ನಡೆಸಲಾಯಿತು. ಎಂ.ಎಲ್‌ ಸಿ. ಶ್ರೀ ಶಾಂತರಾಮ ಸಿದ್ಧಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಕೊಂಕಣಿ ಭಾಷೆ ಸಂಸ್ಕೃತಿಯ ಪ್ರತಿರೂಪ. ಈ ಭಾಷೆಯ ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ದಾಟಿಸುವ ಕಾರ್ಯವಾಗಬೇಕೆಂದು ಕರೆ ನೀಡಿದರು. ಉಧ್ಯಮಿ ಶ್ರೀ ಮುರಳೀಧರ ಪ್ರಭು, ಕೊಂಕಣಿ ಪರಿಷತ್‌ ಅಧ್ಯಕ್ಷರಾದ ಶ್ರೀ ಅರುಣ ಉಭಯಕರ್‌, ಹೊನ್ನಾವರ ಚರ್ಚ್‌ ಧರ್ಮಗುರುಗಳಾದ ಫಾ ಜೋನ್‌ ರೋಡ್ರಿಗಸ್‌, ಸಾಮಾಜಿಕ ಕಾರ್ಯಕರ್ತ ಎಂ ಬಿ ಪೈ, ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ‍ಶ್ರೀಮತಿ ನಿರ್ಮಲಾ ದಯಾನಂದ ಪ್ರಭು ಹಾಗೂ ಶ್ರೀಮತಿ ಅನುಷಾ ಅರುಣ ಮಣಕೀಕರ ರವರ ಕೊಂಕಣಿ ಸಮೂಹ ನೃತ್ಯ ಪ್ರದರ್ಶನಗೊಂಡಿತು.

3.ಕೊಂಕಣಿ ಭಾಷಾ ರಾಷ್ಟ್ರೀಯ ಮಾನ್ಯತಾ ದಿನಾಚರಣೆ

ಕೊಂಕಣಿ ಮಾನ್ಯತಾ ದಿನಾಚರಣೆಯ ತೃತೀಯ ಕಾರ್ಯಕ್ರಮವನ್ನು ಅಕಾಡೆಮಿಯ ಸದಸ್ಯರಾದ ಶ್ರೀ ಭಾಸ್ಕರ ನಾಯಕ್‌ ರವರ ಸಂಚಾಲಕತ್ವದಲ್ಲಿ ದಾವಣಗೆರೆಯ ‍ಶ್ರೀಮತಿ ಗೌರಮ್ಮ ನರಹರಿ ಶೇಟ್‌ ಕಲ್ಯಾಣ ಮಂಟಪದಲ್ಲಿ ದಿನಾಂಕ 23.08.2020 ರಂದು ನಡೆಸಲಾಯಿತು. ದಾವಣಗೆರೆ ಗೌಡ ಸಾರಸ್ವತ ಸಮಾಜದ ಅಧ್ಯಕ್ಷರಾದ ಶ್ರಿ ಸಾಲಿಗ್ರಾಮ ಗಣೇಶ್‌ ಶೆಣೈಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು. ದಾವಣಗೆರೆ ದೈವಜ್ಞ ಬ್ರಾಹ್ಮಣ ಸಮಾಜದ ಅಧ್ಯಕ್ಷರಾದ ಶ್ರೀ ಸತ್ಯನಾರಾಯಣ ರಾಯ್ಕರ್‌, ದಾವಣಗೆರೆ ಸೈಂಟ್‌ ತೋಮಸ್‌ ಚರ್ಚ್ ಧರ್ಮಗುರುಗಳಾದ ಫಾ| ಸ್ಟೀವನ್‌ ಡೇಸಾ ರವರು ಮುಖ್ಯ ಅತಿಥಿಗಳಾಗಿ ಭಾಗಹಿಸಿದ್ದರು. ‍ಶ್ರೀಮತಿ ಶೀಲಾ ರವಿಚಂದ್ರ ನಾಯಕ್‌ ಸಂಗಡಿಗರಿಂದ ಕೊಂಕಣಿ ಗಾಯನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಡಾ ಆರತಿ ಸುಂದರೇಶ್‌ ಕಾರ್ಯಕ್ರಮ ನಿರೂಪಿಸಿದರು, ಶ್ರೀ ಕೆ ಯೋಗೀಶ್‌ ಪೈ ಸ್ವಾಗತಿಸಿದರು, ‍ಶ್ರೀ ಬಿ.ಕೆ ಶ್ರೀಪತಿ ನಾಯಕ್‌ ವಂದಿಸಿದರು.

4.ಕೊಂಕಣಿ ರಾಷ್ಟ್ರ ಮಾನ್ಯತ ದೀಸ-2020

ಕೊಂಕಣಿ ಮಾನ್ಯತಾ ದಿನಾಚರಣೆಯ ಅಂಗವಾಗಿ ಕೊಂಕಣಿ ರಾಷ್ಟ್ರ ಮಾನ್ಯತಾಯ ದೀಸ-2020 ಕಾರ್ಯಕ್ರಮವನ್ನು ಅಕಾಡೆಮಿ ಸದಸ್ಯರಾದ ಶ್ರೀ ವಸಂತ ಬಾಂದೇಕರ್‌ ರವರ ಸಂಚಾಲಕತ್ವದಲ್ಲಿ ದಿನಾಂಕ 26.08.2020 ರಂದು ‍‍ಕಾರವಾರದ ಶ್ರೀ ಭಾರತಮಾತಾ ಮಂದಿರ ಸಂಸ್ಥಾನ(ರಿ) ಇಲ್ಲಿ ದಿನಾಂಕ 26.08.2020 ರಂದು ನಡೆಸಲಾಯಿತು. ಆದ್ಲೊ ಗ್ರಾಮ ಪಂಚಾಯತ್‌ ಸದಸ್ಯರಾದ ‍ಶ್ರೀ ದೀಪಕ ದೇಸಾಯಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರವಾರ ರೋಟರಿ ಕ್ಲಬ್‌ ಕಾರ್ಯದರ್ಶಿ ‍ಶ್ರೀ ಗಣಪತಿ ಬಾಡಕರ, ಕೊಂಕಣ ಸೌಹಾರ್ದ ಕೋ.ಆ.ಕ್ರೇ.ಸೊಸೈಟಿಯ ಶ್ರೀ ಪ್ರಾನ್ಸಿಸ್‌ ಬೋರ್ಜಿಸ್‌ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

5.ಕೊಂಕಣಿ ಮಾನ್‌ ಬರಯ್ಣಾರಾಚಿ ಮುಲಕಾತ್-‌ ‍ಶ್ರೀ ಎಂ ಮಾಧವ ಪೈ

ಕೊಂಕಣಿ ಸಾಹಿತಿ, ಲೇಖಕ ‍ಶ್ರೀ ಎಂ ಮಾಧವ ಪೈ ಅವರೊಂದಿಗೆ ಸಂದರ್ಶನ ಕಾರ್ಯಕ್ರಮವನ್ನು ವಿ4 ಮೀಡಿಯಾದಲ್ಲಿ ದಿನಾಂಕ 3.12.2020 ರಂದು ನಡೆಸಲಾಯಿತು. ಪಿಂಗಾರ ಪತ್ರಿಕೆಯ ಸಂಪಾದಕರಾದ ‍ಶ್ರೀ ರೈಮಂಡ್‌ ಡಿಕುನ್ಹ ಕಾರ್ಯಕ್ರಮ ನಿರೂಪಿಸಿದರು. ಅಕಾಡೆಮಿಯ ಅಧ್ಯಕ್ಷರಾದ ಡಾ ಕೆ ಜಗದೀಶ್‌ ಪೈ ಯವರು ಅತಿಥಿಯವರನ್ನು ಗೌರವಿಸಿದರು. ಕಾರ್ಯಕ್ರಮದಲ್ಲಿ ಅಕಾಡೆಮಿಯ ರಿಜಿಸ್ಟ್ರಾರ್‌ ಶ್ರೀ ಕುಮಾರ್‌ ಬಾಬು ಬೆಕ್ಕೇರಿ, ಸದಸ್ಯರಾರ ಶ್ರೀ ನವೀನ್‌ ನಾಯಕ್‌, ಕೆನ್ಯೂಟ್‌ ಜೀವನ್‌ ಪಿಂಟೊ ಹಾಗೂ ಅರುಣ್‌ ಜಿ ಶೇಟ್‌ ಉಪಸ್ಥಿತರಿದ್ದರು.

6.ಮ್ಹಾಲ್ಗಾಡ್ಯಾ ಕೊಂಕಣಿ ಚಳವಳಿಗಾರಾಚಿ ಮುಲಕಾತ್‌ - ಮಾ.ಬಾ. ಮಾರ್ಕ್‌ ವಾಲ್ಡರ್.‌

ಕೊಂಕಣಿ ಸಾಹಿತಿ, ಲೇಖಕ ಹಾಗೂ ಚಳವಳಿಗಾರ ಪಾ. ಮಾರ್ಕ್‌ವಾಲ್ಡರ್‌ ಅವರೊಂದಿಗಿನ ಸಂದರ್ಶನ ಕಾರ್ಯಕ್ರಮವನ್ನು ವಿ4 ಮೀಡಿಯಾದಲ್ಲಿ ದಿನಾಂಕ 24.12.2020 ರಂದು ನಡೆಸಲಾಯಿತು. ಪಿಂಗಾರ ಪತ್ರಿಕೆಯ ಸಂಪಾದಕರಾದ ‍ಶ್ರೀ ರೈಮಂಡ್‌ ಡಿಕುನ್ಹ ಕಾರ್ಯಕ್ರಮ ನಿರೂಪಿಸಿದರು.  ಕಾರ್ಯಕ್ರಮದಲ್ಲಿ ಅಕಾಡೆಮಿಯ ರಿಜಿಸ್ಟ್ರಾರ್‌ ಶ್ರೀ ಆರ್.‌ ಮನೋಹರ್‌ ಕಾಮತ್, ಸದಸ್ಯರಾರ ಶ್ರೀ ನವೀನ್‌ ನಾಯಕ್‌,  ಅರುಣ್‌ ಜಿ ಶೇಟ್‌ ಉಪಸ್ಥಿತರಿದ್ದರು. ಅಕಾಡೆಮಿಯ ಪರವಾಗಿ ಅತಿಥಿಯವರನ್ನು ಸನ್ಮಾನಿಸಿ ಗೌರವವಿಸಲಾಯಿತು.

7.ಕೊಂಕಣಿ ಸಾಹಿತ್ಯ ಸಾಂಸ್ಕೃತಿಕ ಸಂಗಮ.‌

ದೈವಜ್ಞ ವಿದ್ಯಾವರ್ದಕ ಸಂಘ ಹುಬ್ಬಳ್ಳಿ ಇವರ ಸಹಯೋಗದಲ್ಲಿ ಹುಬ್ಬಳ್ಳಿಯ ದೈವಜ್ಞ ಕಲ್ಯಾಣ ಮಂಟಪದಲ್ಲಿ ಕೊಂಕಣಿ ಸಾಹಿತ್ಯ ಸಾಂಸ್ಕೃತಿಕ ಸಂಗಮ ಕಾರ್ಯಕ್ರಮವನ್ನು ದಿನಾಂಕ 23.01.2021 ರಂದು ನಡೆಸಲಾಯಿತು. ಹುಬ್ಬಳ್ಳಿ ದೈವಜ್ಞ ಸಮಾಜದ ಅಧ್ಯಕ್ಷರಾದ ಶ್ರೀ ಚಂದ್ರಕಾಂತ ಅಣವೇಕರ ಕಾರ್ಯಕ್ರಮವನ್ನು ಉದ್ಘಾಟಿಸಿ ಯುವಜನತೆಯಲ್ಲಿ ಕೊಂಕಣಿ ಭಾಷೆಯ ಬಗ್ಗೆ ಅಭಿಮಾನ ಬೆಳೆಸಬೇಕು. ಇತರರೊಂದಿಗೆ ಸಂವಹಿಸುವಾಗ ನಮ್ಮ ಮಾತೃಭಾಷೆಯಲ್ಲಿಯೇ ಮಾತನಾಡಿ ಭಾಷೆಯನ್ನು ಉಳಿಸಿ ಬೆಳೆಸಬೇಕೆಂದು ಕರೆ ನೀಡಿದರು. ಕವಿವಿ ನಿವೃತ್ತ ಉಪನ್ಯಾಸಕಿ ಡಾ ಸರಯೂ ಪ್ರಭು ತಮ್ಮ ಉಪನ್ಯಾಸದಲ್ಲಿ ಕೊಂಕಣಿ ಎನ್ನುವುದು ರುಚಿಯಾದ ಭಾಷೆ, ಭಾರತದ ಸಂವಿಧಾನದಲ್ಲಿ ಮಾನ್ಯತೆ ಪಡೆದಿದ್ದು, ವಿಶ್ವದೆಲ್ಲೆಡೆ ವಿವಿಧ ಕ್ಷೇತ್ರಗಳಲ್ಲಿ ಕೊಂಕಣಿ ಭಾಷಿಕರು ತಮ್ಮ ಅಸ್ತಿತ್ವವನ್ನು ತೋರಿಸಿಕೊಟ್ಟಿದ್ದಾರೆ ಇದು ನಮ್ಮ ಹೆಮ್ಮೆ ಎಂದು ಹೇಳಿದರು. ಅಕಾಡೆಮಿಯ ಅಧ್ಯಕ್ಷರಾದ ಡಾ ಕೆ ಜಗದೀಶ್‌ ಪೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು. ವಿವಿಧ ಕೊಂಕಣಿ ಪ್ರತಿಭೆಗಳಾದ ವನಿತಾ ಮಹಾಲೆ ಮತ್ತು ತಂಡ, ಗಾಯತ್ರಿ ಕಾಮತ್‌ ಮತ್ತು ತಂಡ, ಸುಧಾ ಪಲಾಲಕರ ಮತ್ತು ತಂಡ ಹಾಗೂ ಪ್ರಜ್ವಲ ಹಾವ್ಯಾಸಿ ಕಲಾ ತಂಡದಿಂದ ಕೊಂಕಣಿ ಸಾಂಸ್ಕೃತಿ ಕಾರ್ಯಕ್ರಮ ಪ್ರದರ್ಶನಗೊಂಡಿತು. ಕಾರ್ಯಕ್ರಮದಲ್ಲಿ ಕೊಂಕಣಿ ಹುಬ್ಬಳ್ಳಿ ವಲಯದ ವಿವಿದ ಕೊಂಕಣಿ ಸಮುದಾಯದ ಮುಖಂಡರು ಅತಿಥಿಗಳಾಗಿ ಭಾಗವಹಿಸಿದ್ದರು. ಸದಸ್ಯರಾದ ಡಾ.ವಸಂತ ಬಾಂದೆಕರ್‌ ಕಾರ್ಯಕ್ರಮ ನಿರೂಪಿಸಿದರು, ಸುರೇಂದ್ರ ಪಾಲನಕರ್‌ ವಂದಿಸಿದರು.

8.ಮಹಿಳಾ ಸಾಹಿತ್ಯ ಆನಿ ಸಾಂಸ್ಕತಿ ಪ್ರಾತ್ಯಕ್ಷಿಕೆ

ದಿನಾಂಕ 24.01.2021 ರ ರವಿವಾರ ಬೆಳಗಾವಿಯ ದೈವಜ್ಞ ಮಂಗಲ ಕಾರ್ಯಾಲಯದಲ್ಲಿ ಮಹಿಳಾ ಸಾಹಿತ್ಯ ಆನಿ ಸಾಂಸ್ಕೃತಿಕ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ನಡೆಸಲಾಯಿತು. ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಅಭಯ ಪಾಟೀಲ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಅಕಾಡೆಮಿಯ ಅಧ್ಯಕ್ಷರಾದ ಡಾ ಕೆ ಜಗದೀಶ್‌ ಪೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕೊಂಕಣಿ ಭಾಷೆಯು ಬೆಳೆದು ಬಂದ ಹಾದಿ, ಪ್ರಸ್ತುತ ಸ್ಥಿತಿಗತಿ ಹಾಗೂ ಕೊಂಕಣಿಯ ಬೆಳವಣಿಗೆಗಾಗಿ ಕೊಂಕಣಿ ಬಾಂಧವರು ಮಾಡಬೇಕಾದ ಕೆಲಸದ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬೆಳಗಾಗಿ ದೈವಜ್ಞ ಸಮಾಜದ ಅಧ್ಯಕ್ಷರಾದ ಶ್ರೀ ದಯಾನಂದ ನೇತಲಕರ, ಧಾರವಾಡ ರಂಗಾಯಣದ ನಿರ್ದೇಶಕರಾದ ರಮೇಶ್‌ ಪರವಿನಾಯ್ಕರ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕೊಂಕಣಿ ಭಾಷೆ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಕುರಿತಾಗಿ ವಿಶೇಷ ಉಪನ್ಯಾಸವನ್ನು ಏರ್ಪಡಿಸಲಾಗಿತ್ತು. ಸಪ್ತಸ್ವರ ಸಂಗೀತ ವಿದ್ಯಾಲಯ ಬೆಳಗಾವಿ ಇವರಿಂದ ಸಂಗೀತ ಕಾರ್ಯಕ್ರಮ, ವರ್ಷಾ ಮತ್ತು ಪಂಗಡ ಹಾಗೂ ಪ್ರೀಯಾ ಮತ್ತು ಪಂಗಡದಿಂದ ಸಾಂಪ್ರದಾಯಿಕ ಜಾನಪದ ನೃತ್ಯ ಪ್ರದರ್ಶನ ನಡೆಯಿತು..

9.ಕೊಂಕಣಿ ಸಾಹಿತ್ಯ ಸಮ್ಮೇಳನ

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ದಿನಾಂಕ 20.03.2021 ಹಾಗೂ 21.03.2021 ರಂದು ಮಣಿಪಾಲದ ಆರ್.ಎಸ್.ಬಿ ಸಭಾಭವನದಲ್ಲಿ ಎರಡು ದಿನಗಳ ಕೊಂಕಣಿ ಸಾಹಿತ್ಯ ಸಮ್ಮೇಳನವನ್ನು ನಡೆಸಲಾಯಿತು. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ದೀಪ ಬೆಳಗಿಸಿ ಸಮ್ಮೇಳಕ್ಕೆ ಚಾಲನೆ ನೀಡಿ, ರಾಮಾಯಣ ಮಹಾಭಾರತದಲ್ಲಿ ಕೊಂಕಣ ದೇಶದ ಉಲ್ಲೇಖವಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಕೊಂಕಣಿ ಭಾಷೆ ಹಾಸುಹೊಕ್ಕಿದೆ. ಸಂವಿಧಾನದ 8 ನೇ ಪರಿಚ್ಚೇದದಲ್ಲಿ ಸೇರಿಸುವ ಮೂಲಕ ಗುರುತಿಸಲ್ಪಟ್ಟಿದೆ. ಹೀಗೆ ಕೊಮಕಣಿ ಭಾಷೆ ತನ್ನದೇ ವಿಶೇ಼ಷ  ಶಕ್ತಿಯಿಂದ ಎಲ್ಲ ಕ್ಷೇತ್ರಗಳಿಗೂ ಸಾಕಷ್ಟು ಕೊಡುಗೆ ನೀಡಿ ಸರ್ವಶೇಷ್ಠ ಭಾಷೆಯಾಗಿದೆ. ಸರ್ವವ್ಯಾಪಿಯಾದ ಈ ಭಾಷೆ ಸರ್ವಸ್ಪರ್ಶಿಯಾಗಲಿ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಆಶಿಸಿದರು ಹಾಗೂ ಕೊಂಕನಿ ಭವನ ನಿರ್ಮಾಣಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ಸಮ್ಮೇಳನಾಧ್ಯಕ್ಷ ಡಾ ಕಸ್ತೂರಿ ಮೋಹನ್‌ ಪೈ ಮಾತನಾಡಿ 1956 ರಲ್ಲಿ ಋಾಜ್ಯ ಪುನರ್ವಿಂಗಡಣೆಯಾದಾಗ ಅಲ್ಪ ಸಂಖ್ಯಾಕರ ಭಾಷೆಯಗಿದ್ದ ಕೊಂಕಣಿ ಭೆಳವಣಿಗೆ ಹೊಂದುತ್ತಾ 6ರಿಂದ 10 ನೇ ತರಗತಿ ವರೆಗೆ ಪಠ್ಯವಾಯಿತು. ಮುಂದಿನ ದಿನಗಳಲ್ಲಿ ಪಿಯುಸಿ, ಪದವಿ ತರಗತಿಗಳಲ್ಲಿಯೂ ಕೊಂಕಣಿ ಭಾಷಾಶಿಕ್ಣಣ ದೊರಕುವಂತೆ ಮಾಡಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿ ಅಧ್ಯಕ್ಷ ಡಾ ಕೆ ಜಗದೀಶ್‌ ಪೈ ಮಾತನಾಡಿ ಕೊಂಕಣಿ ಭಾಷಿಗರು ಯಾವುದೇ ದೇಶದಲ್ಲಿದ್ದರೂ ಮಾತೃಭಾ಼ಷೆಯನ್ನು ಮರೆಯಬಾರದು. ತಮ್ಮ ಮಕ್ಕಳೊಂದಿಗೆ ಸ್ವಲ್ಪ ಹೊತ್ತಾದರೂ ಮಾತೃಭಾಷೆಯಲ್ಲಿಯೇ ಮಾತನಾಡುವುದು ಒಳಿತು ಎಂದರು.  ಅಕಾಡೆಮಿಯಿಂದ ಪ್ರಕಟಿಸಲ್ಪಟ್ಟ ಕಾಣಿಯಾಂಚೊ ತುರೊ- ವಾಲ್ಟರ್‌ ರೊಸೆರಿಯೊ, ಗಲಿವರಾಚೊ ಪ್ರವಾಸ್-ಜೆ.ಎಪ್‌ ಡಿಸೋಜಾ, ಗಜ್‌ಬಜೋ-ಸೀಮಾಕಾಮತ್‌, ಅಪಾಲಿಪಾ-ಫೆಲ್ಸಿಲೋಬೊ, ಬೊಗ್ಣಾಂಚಿ ಲ್ಹಾರಾಂ- ಚಾಲ್ಸ್‌ ಡಿಸೋಜಾ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು. ವಿವಿಧ ಸಾಹಿತ್ಯ ಗೋಷ್ಠಿ, ಕವಿಗೋಷ್ಟಿ, ಶಿಕ್ಷಣ ಗೋಷ್ಠಿ, ಸಾಂಸ್ಕೃತಿಕ ವೈಭವದೊಂದಿಗೆ ಎರಡು ದಿನಗಳ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.

ಇತ್ತೀಚಿನ ನವೀಕರಣ​ : 28-07-2023 01:02 PM ಅನುಮೋದಕರು: Karnataka Konkani Sahitya Academy



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080