Feedback / Suggestions

2022-23 Programs

 

1. ಅಮೃತ ಭಾರತಿಗೆ ಕನ್ನಡದ ಆರತಿ- ಕೊಂಕಣಿ ವೈವಿದ್ಯ

ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜರುಗಿದ ಅಮೃತ ಭಾರತಿಗೆ ಕನ್ನಡದ ಆರತಿ ಕಾರ್ಯಕ್ರಮದಲ್ಲಿ ಕೊಂಕಣಿ ಕಲಾ ಪ್ರದರ್ಶನ ನಡೆಯಿತು. ಸಂತ ಅಲೋಶಿಯಸ್‌ ಕಾಲೇಜಿನ ಕೊಂಕಣಿ ವಿಭಾಗದ ವಿದ್ಯಾರ್ಥಿಗಳ ತಂಡ ಈ ಪ್ರದರ್ಶನವನ್ನು ನೀಡಿತು.

Photo : ವೀಕ್ಷಿಸಿ

2.ಕೊಂಕಣಿ ಮಾನ್ಯತಾ ದಿನಾಚರಣೆ – ಮಂಗಳೂರು

ಕೊಂಕಣಿ ಭಾಷೆಗೆ ಸಾಂವಿಧಾನಿಕ ಮಾನ್ಯತೆ ದೊರೆತ ಸವಿನೆನಪಿಗಾಗಿ ಕೊಂಕಣಿ ಮಾನ್ಯತಾ ದಿನಾಚರಣೆಯ ಆಚರಣೆ ದೈವಜ್ಞ ಬ್ರಾಹ್ಮಣ ಕಲ್ಯಾಣ ಮಂಟಪ, ಉರ್ವಾ, ಅಶೋಕನಗರ ಮಂಗಳೂರು ಇಲ್ಲಿ ದಿನಾಂಕ 20.08.2022 ರಂದು ನಡೆಯಿತು. ಸಾಧನ ಬಳಗದ ವಿದ್ಯಾರ್ಥಿಗಳ ನಾಡಗೀತೆ ಹಾಗೂ ಕೊಂಕಣಿ ಗೀತೆ ಯೊಂದಿಗೆ ಕಾರ್ಯಕ್ರಮವು ಆರಂಭವಾಯಿತು. ವೇದಿಕೆಯಲ್ಲಿರುವ ಗಣ್ಯರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಕಾಡೆಮಿಯ ಅಧ್ಯಕ್ಷರಾದ ಡಾ ಕೆ ಜಗದೀಶ್‌ ಪೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದೈವಜ್ಞ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಕೆ ಸುಧಾಕರ್‌ ಭಟ್‌ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕೊಂಕಣಿ ಭಾಷೆಯ ಮಹತ್ವನ್ನು ಸಾರುತ್ತಾ ಹಲವಾರು ಮಹನೀಯರ ಪ್ರಯತ್ನದ ಫಲವಾಗಿ ಕೊಂಕಣಿ ಭಾಷೆಗೆ ಸಾಂವಿಧಾನಿಕ ಮಾನ್ಯತೆ ದೊರಕಿದೆ. ಇವರ ಈ ಪ್ರಯತ್ನ ವ್ಯರ್ಥವಾಗದಂತೆ ನಮ್ಮ ಇಂದಿನ ಪೀಳಿಗೆಯವರಲ್ಲಿ ಹೆಚ್ಚು ಕೊಂಕಣಿ ಭಾಷಾಭಿಮಾನ ಬೆಳೆಸುವ ಪ್ರಯತ್ನ ನಡೆಯಬೇಕಿದೆ ಎಂದರು. ಕೊಂಕಣಿ ಸಾಹಿತಿ ಹಾಗೂ ಪತ್ರಕರ್ತರಾದ ಶ್ರೀ ಎಚ್ಚೆಮ್‌ ಪೆರ್ನಾಲ್‌ ರವರು ಕೊಂಕಣಿ ಮಾನ್ಯತಾ ದಿನಾಚರಣೆಯ ಕುರಿತ ತಮ್ಮ ವಿಶೇಷ ಉಪನ್ಯಾಸದಲ್ಲಿ ಕೊಂಕಣಿ ಭಾಷೆಗೆ ಮಾನ್ಯತೆ ದೊರೆತಿರುವುದರಿಂದ ಆಗಿರುವಂತಹ ಪ್ರಯೋಜನಗಳು, ಕೊಂಕಣಿ ಭಾಷೆಗೆ ಮಾನ್ಯತೆ ದೊರೆಯಲು ಸಹಕಾರಿಯಾದ ಅದರ ಹಿಂದಿನ ಕೆಲವು ಘಟನೆಗಳ ಕುರಿತು ಮಾಹಿತಿ ನೀಡಿದರು. ಕಲಾತಂಡಗಳಿಂದ ಕೊಂಕಣಿ ಭಾಷೆ, ಜಾನಪದ, ಕಲೆ ಕುರಿತಂತೆ ಸಾಂಸ್ಕೃತಿ ವೈಭವದ ಪ್ರದರ್ಶನ ನಡೆಯಿತು. ಸದಸ್ಯ ಸಂಚಾಲಕರಾದ ಶ್ರೀ ಗೋಪಾಲಕೃಷ್ಣ ಭಟ್‌ ಸ್ವಾಗತಿಸಿದರು, ಸದಸ್ಯರಾರ ಶ್ರೀ ಅರಣ್‌ ಜಿ ಶೇಟ್‌ ಕಾರ್ಯಕ್ರಮ ನಿರೂಪಿಸಿದರು ಹಾಗೂ ಸದಸ್ಯರಾದ ಶ್ರೀ ಕೆನ್ಯೂಟ್‌ ಜೀವನ್‌ ಪಿಂಟೊ ವಂದಿಸಿದರು.

Photo : ವೀಕ್ಷಿಸಿ

3.ಕೊಂಕಣಿ ಮಾನ್ಯತಾ ದಿನಾಚರಣೆ – ಕಾರವಾರ

ದಿನಾಂಕ 20.08.2022 ರಂದು ಕೊಂಕಣಿ ರಾಷ್ಟ್ರ ಮಾನ್ಯತಾ ದಿನದ ಅಂಗವಾಗಿ ಕಾರವಾರದ ಕನ್ನಡ ಭವನದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಆಚರಿಸಲ್ಪಟ್ಟ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ಉದ್ಘಾಟಕರಾಗಿ ಆಗಮಿಸಿದ ಕಾರವಾರ ನಗರಸಭಾ ಸದಸ್ಯರಾದ ಶೃೀ ಪ್ರೇಮಾನಂದ ಗುನಗಾರವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ತಾನು ಕನ್ನಡ ಮಾತೃಭಾಷಿಕನಾದರೂ ಕೊಂಕಣಿಯನ್ನು ಚೆನ್ನಾಗಿ ಮಾತನಾಡಬಲ್ಲೆ ಏಕೆಂದರೆ ನನ್ನ ಹೆಚ್ಚು ಮಿತ್ರರು ಕೊಂಕಣಿಗರಾಗಿದ್ದಾರೆಂದು ಕೊಂಕಣಿಯಲ್ಲಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಕೊಂಕಣ ಮರಾಠ ಸಮಾಜದ ಶ್ರೀ ನಾಗೇಂದ್ರ ದೇಸಾಯಿಯವರು ಕೊಂಕಣಿ ಭಾಷೆ ಸರ್ವ ಧರ್ಮದ ಭಾಷೆಯಾಗಿದ್ದು, ವಿವಿಧ ಧರ್ಮ ಹಾಗೂ ಜಾತಿ ಸಮುದಾಯದವರನ್ನು ಬೆಸೆದ ಭಾಷೆಯಾಗಿದೆ ಎಂದರು. ಅದರಂತೆ ಇನ್ನೋರ್ವ ಅತಿಥಿ ಉದ್ಯಮಿ ಶ್ರೀ ನಾಗೇಂದ್ರ ವೆರ್ಣೇಕರವರು ಮಾತನಾಡಿ ಭಾಷೆಗಳನ್ನು ಗೌರವಿಸೂಣ, ಬೆಳೆಸೋಣ ಎಂದರು. ಇದೇ ಸಂದರ್ಭದಲ್ಲಿ ನೆರೆದ ವಿದ್ಯಾರ್ಥಿಗಳಿಗೂ ಸಭಿಕರಿಗೂ ‍ಶ್ರೀ ಶ್ರೀಧರ ಹಳಗೇಕರ ಅವರು ಉತ್ತಮ ಸಂಸ್ಕಾರದ ಬಗ್ಗೆ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿಷ್ಣು ರಾಣೆ ಮಾತನಾಡಿ ನಶಿಸಿ ಹೋಗುತ್ತಿರುವ ಕೊಂಕಣಿ ಜಾನಪದ ಕಲೆಗಳನ್ನು ತರಬೇತಿ ನೀಡಿ ಉಳಿಸುವ ಅವಶ್ಯಕತೆ ಇದೆ ಎಂದರು. ಸರಸ್ವತಿ ವಿದ್ಯಾಲಯದ ವಿದ್ಯಾರ್ಥಿನಿಯರು ಸ್ವಾಗತ ಗೀತೆ ಹಾಡಿದರು. ಸಂಚಾಲಕ ಸದಸ್ಯರಾದ ಡಾ ವಸಂತ ಬಾಂದೇಕರ್‌ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ವಿದ್ಯಾರ್ಥಿಗಳಿಗಾಗಿ ಕೊಂಕಣಿ ರಸಪ್ರಶ್ನೆಯನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ತಾಲೂಕು ಅಧ್ಯಕ್ಷರಾದ ಶ್ರೀ ರಾಮಾ ನಾಯ್ಕ ಮತ್ತಿತರು ಉಪಸ್ಥಿತರಿದ್ದರು.

Photo : ವೀಕ್ಷಿಸಿ

4. ಕೊಂಕಣಿ ಮಾನ್ಯತಾ ದಿನಾಚರಣೆ – ಹುಬ್ಬಳ್ಳಿ

ಅಕಾಡೆಮಿ ವತಿಯಿಂದ ದಿನಾಂಕ 20.08.2022 ರಂದು ಹುಬ್ಬಳ್ಳಿಯ ವಿದ್ಯಾನಗರದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಜರುಗಿದ ಕೊಂಕಣಿ ರಾಷ್ಟ್ರೀಯ ಮಾನ್ಯತಾ ದಿವಸದ ಉದ್ಘಾಟನೆಯನ್ನು ನೆರವೇರಿಸಿದ ಶ್ರೀ ಸತೀಶ ಎಸ್‌ ಶೇಜವಾಡ ರವರು ಮಾತನಾಡಿ ಕೊಂಕಣಿ ಭಾಷೆಯಲ್ಲಿ ಮೃದುತ್ವ ಹಾಗೂ ಬಾಂಧವ್ಯ ಬೆಸೆಯುವ ಕಲೆ ಇದೆ. ಎಲ್ಲಾ ಕೊಂಕಣಿ ಬಾಂಧವರು ಒಂದಾಗಿ ಭಾಷೆಯ ಅಭಿವೃಧ್ದಿಗೆ ಶ್ರಮಿಸಬೇಕು ಎಂದರು. ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ವಿಜಯ ವರ್ಣೇಕರ ಮಾತನಾಡಿ ಅಕಾಡೆಮಿಗಳಂತಹ ಹೊಸ ಹೊಸ ತಂಡಗಳು ಹೊಸ ಕಾರ್ಯಕ್ರಮ ಆಯೋಜಿಸುವ ನಿಟ್ಟಿನಲ್ಲಿ ಕಲಾವಿದರ ಅಭಿಲಾಷೆಗಳನ್ನು ಈಡೇಸುತ್ತಿವೆ. ನಮ್ಮ ಮ‍ಧ್ಯೆ ಇರುವ ಜಾನಪದ, ನಾಟಕ, ನೃತ್ಯ ಸಂಗೀತ ಕಲಾ ಪ್ರತಿಭೆಗಳಿಗೆ ಪ್ರೋತ್ಸಾಹ ಸಿಗುವಂತಾಗಿದೆ ಎಂದರು. ಉಪನ್ಯಾಸ ನೀಡಿದ ಡಾ ಉದಯ ರಾಯಕರ್‌ ಮಾತನಾಡಿ ಕರ್ನಾಟಕ ವಿವಿಯ ಧಾರವಾಡ ಕೊಂಕಣಿ ಅಧ್ಯಯನ ಪೀಠ ಕೊಂಕಣಿ ಅಭಿವೃದ್ಧಿಗಾಗಿ ಹಾಗೂ ನಿರಂತರವಾಗಿ ವ್ಯಾಸಾಂಗ ನಡೆಸಲು ತಯಾರಿ ನಡೆಸಿದೆ ಎಂದು ತಿಳಿಸಿದರು. ಸದಸ್ಯ ಸಂಚಾಲಕರಾದ ಶ್ರೀ ಸುರೇಂದ್ರ ವಿ ಪಾಲನಕರ್‌ ಸ್ವಾಗತ ಹಾಗೂ ವಂಧನಾರ್ಪಣೆ ಗೈದರು. ಸುನಂದಾ ಪಾಲನಕರ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಕಲಾತಂಡಗಳಿಂದ ಕೊಂಕಣಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Photo : ವೀಕ್ಷಿಸಿ

5. ಕೊಂಕಣಿ ಮಾನ್ಯತಾ ದಿನಾಚರಣೆ – ದಾವಣಗೆರೆ

ಕಲಾಕುಂಚ ಕಚೇರಿ ಸಭಾಂಗಣ, ಕಸ್ತೂರ್ಬಾ ಬಡಾವಣೆ, ದಾವಣಗೆರೆ ಇಲ್ಲಿ ದಿನಾಂಕ 20.08.2022 ರಂದು ಕೊಂಕಣಿ ಮಾನ್ಯತಾ ದಿನಾಚರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವಂತಹ ‍ಶ್ರೀ ನಲ್ಲೂರು ರೇವಣಕರ್‌ ರವರು ಮಾತನಾಡಿ ಭಾಷೆಯ ಬಗ್ಗೆ ನಮ್ಮ ಕೊಂಕಣಿ ಸಮಾಜದವರು ಆಸಕ್ತಿವಹಿಸಿ ಯುವ ಪೀಳಿಗೆಗೆ ಕೊಂಕಣಿ ಭಾಷಾಬಿಮಾನ ಹೊಂದುವಂತೆ ಕರೆ ನೀಡಿದರು. ‍ಶ್ರೀ ಸಾಲಿಗ್ರಮ ಗಣೇಶ್‌ ಶೆಣೈಯವರು ಕಾರ್ಯಕ್ರಮವನ್ನು ಉದ್ಗಾಟಿಸಿದರು. ಕೊಂಕಣಿ ಭಾಷೆಯ ಕುರಿತು ಶ್ರೀ ಸರಸ್ವತಿ ದಾಸಪ್ಪ ಶೆಣೈ ವಿಶೇಷ ಉಪನ್ಯಾಸ ನೀಡಿದರು. ಗೌಡ ಸಾರಸ್ವತ ಸಮಾಜದ ಅಧ್ಯಕ್ಷರಾದ ಶ್ರೀಮತಿ ಅಮಿತಾ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ‍ಶ್ರೀಮತಿ ಜ್ಯೋತಿ ಗಣೇಶ್‌ ಶೆಣೈ ಮತ್ತು ತಂಡದವರಿಂದ ಕೊಂಕಣಿ ಜಾನಪದ ನೃತ್ಯ, ‍ಶ್ರೀಮತಿ ಮುಕ್ತಾ ‍ಶ್ರೀನಿವಾಸ ಪ್ರಭು ತಂಡದಿಂದ ಕೊಂಕಣಿ ಗೀತಗಾಯನ ಕಾರ್ಯಕ್ರಮ ಪ್ರದರ್ಶನಗೊಂಡಿತು. ‍‍‍ಶ್ರೀ ಬೇಳೂರು ಸಂತೋಷ್‌ ಕುಮಾರ್‌ ಶೇಟ್‌ರವರು ಕಾರ್ಯಕ್ರಮ ನಿರ್ವಹಿಸಿದರು. ಸದಸ್ಯ ಸಂಚಾಲಕರಾದ ‍ಶ್ರೀ ಭಾಸ್ಕರ್‌ ನಾಯಕ್‌ರವರು ಸ್ವಾಗತಿಸಿ, ವಂದಿಸಿದರು.

Photo : ವೀಕ್ಷಿಸಿ

6. ಕೊಂಕಣಿ ಮಾನ್ಯತಾ ದಿನಾಚರಣೆ – ಬೆಳಗಾವಿ

ಕೊಂಕಣಿ ಭಾಷೆಯು ಜಾನಪದ ಕಲೆಗಳಲ್ಲಿ ‍‍ಶ್ರೀಮಂತವಾಗಿದ್ದು, ಮಹಾರಾಷ್ಟ್ರದಲ್ಲಿ ದಶಾವತಾರ, ಕೇರಳದಲ್ಲಿ ಗೊಡ್ಡೆ ರಾಮಾಯಣ, ಗೋವಾದಲ್ಲಿ ದೇಖಣಿ, ಪುಗಡಿ, ಜಾಗೋರ ತ್ರಿ ಯಾತ್ರ, ಪ್ರಸಿದ್ದವಾಗಿದೆ ಎಂದು ದೈವಜ್ಞ ಸಮಾಜದ ಧುರೀಣ ಕಿಶೋರ್‌ ಅಣ್ವೇಕರ್‌ ಹೇಳಿದರು. ಅಕಾಡೆಮಿ ವತಿಯಿಂದ ಆಯೋಜಿಸಲಾಗಿದ್ದ ಕೊಂಕಣಿ ರಾಷ್ಟ್ರೀಯ ಮಾನ್ಯತಾ ದಿವಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೊಂಕಣಿ ಭಾಷಿಗರಲ್ಲಿ 42 ಪಂಗಡಗಳಿದ್ದು, ಅದರಲ್ಲೂ ಹಿಂದೂ, ಕ್ರಿಶ್ಚಿಯನ್‌ ಮತ್ತು ಮುಸ್ಲೀಮರು ಇರುವುದು ಒಂದು ವಿಶೇಷ ಎಂದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿದ್ದ ಶಾಂತೇಶ ಶೇಟ್‌ ಅವರು ಕರ್ನಾಟಕದಲ್ಲಿರುವ ಅಂದಾಜು 40 ಲಕ್ಷ ಕೊಂಕಣಿ ಭಾಷಿಗರ ಭಾಷಾಭಿಮಾನ ಹಾಗೂ ಸಾಹಿತಿ ಕಲಾವಿದರ ನಿರಂತರ ಚಳುವಳಿಯಿಂದಾಗಿ ವೀರಪ್ಪಮೊಯ್ಲಿಯವರ ಕಾಲದಲ್ಲಿ ಅಕಾಡೆಮಿಯ ಸ್ಥಾಪನೆಯಾಯಿತು ಹಾಗೂ 1992 ರ ಆಗಸ್ಟ್‌ 20 ರಂದು ಕೇಂದ್ರ ಸರಕಾರವು ಭಾರತದ ಸಂವಿಧಾನದ ಎಂಟನೇ ಪರಿಚ್ಚೇದದಲ್ಲಿ ಎಂಟನೇ ಭಾಷೆಯಾಗಿ ಸೇರ್ಪಡಿಸಿ ರಾಷ್ಟ್ರೀಯ ಮನ್ನಣೆ ನೀಡಿದ್ದು ಅಂದಿನಿಂದ ಕೊಂಕಣಿ ರಾಷ್ಟೀಯ ಭಾಷಾ ಗೌರವಕ್ಕೆ ಪಾತ್ರವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಗುರು ಅಣವೇಕರ ಮತ್ತು ಆನಂದ ಅನ್ವೇಕರ್‌ ಹಾಗೂ ಶ್ರೇಯಾ ಅಣ್ವೇಕರ್‌ ಸಂಗೀತ ಕಾರ್ಯಕ್ರಮ ನೀಡಿದರು. ಸದಸ್ಯ ಸಂಚಾಲಕರಾದ ಶ್ರೀ ಪ್ರಮೋದ್‌ ಶೇಟ್‌ ವಂದಿಸಿದರು. 

Photo : ವೀಕ್ಷಿಸಿ

 

7. ಕೊಂಕಣಿ ಮಾನ್ಯತಾ ದಿನಾಚರಣೆ – ಉಡುಪಿ

ಕೊಂಕಣಿ ಭಾಷೆಗೆ ಸಾಂವಿಧಾನಿಕ ಮಾನ್ಯತೆ ದೊರೆತ ಸವಿನೆನಪಿಗಾಗಿ  ಶಿವಪಾಡಿಯ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಕೊಂಕಣಿ ಮಾನ್ಯತಾ ದಿನಾಚರಣೆಯನ್ನು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯೆ ಪೂರ್ಣಿಮಾ ಸುರೇಶ್‌ ನಾಯಕ್‌ ಉದ್ಘಾಟಿಸಿದರು. ಕುಡಾಳ್‌ ದೇಶಸ್ತ ಆದ್ಯ ಗೌಡ ಬ್ರಾಹ್ಮಣ ಸಂಘದ ರಾಧಾಕೃಷ್ಣ ಸಾಮಂತ್‌ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಸಂಘಟನೆ ಅಧ್ಯಕ್ಷೆ ಮಾಧುರಿ ಪಾಟೀಲ್‌, ಚೆರ್ಕಾಡಿ ಆರ್.ಕೆ ಪಾಟ್ಕರ್‌ ಶಾಲೆಯ ಅಧ್ಯಕ್ಷ ಶ್ರೀ ಸತೀಶ್‌ ಪಾಟೀಲ್‌, ಶ್ರೀ ರಮಾನಂದ ಸಾಮಂತ್‌ ಎಸ್.‌ ಶ್ರೀಮತಿ ಆಶಾಪಾಟೀಲ್‌, ಶ್ರೀ ಪ್ರಕಾಶ್‌ ಪ್ರಭು, ಶ್ರೀ ಗೋಪಾಲ್‌ಕೃಷ್ಣ ಪ್ರಭು, ಶ್ರೀ ನಿತ್ಯಾನಂದ ಪಾಟೀಲ್‌ ಉಪಸ್ಥಿತರಿದ್ದರು.

Photo : ವೀಕ್ಷಿಸಿ

8. ಚಾರೋಳಿ ಸಾಹಿತ್ಯ ಸಮ್ಮೇಳನ-2022

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ  ಸಹಯೋಗದೊಂದಿಗೆ ಕೊಂಕಣಿ  ಚಾರೋಳಿ ಸಾಹಿತ್ಯ ಸಮ್ಮೇಳನ ನಗರದ ಸಂದೇಶ ಪ್ರತಿಷ್ಠಾನದ ಸಭಾಭವನದಲ್ಲಿ ಇತ್ತೀಚೆಗೆ ಜರಗಿತು. ಅಖಿಲ ಭಾರತೀಯ ಕೊಂಕಣಿ ಪರಿಷತ್‌ನ ಮಾಜಿ ಅಧ್ಯಕ್ಷೆ ಉಷಾರಾಣೆ ಅವರು ಸಮ್ಮೇಳನ ಉದ್ಘಾಟಿಸಿದರು. ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ| ಜಗದೀಶ ಪೈ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಪಿಯೂಸ್ ಮೊಂತೇರೊ, ವಸಂತ ರಾವ್, ಫಾ| ಸುದೀಪ್ ಪಾವ್, ಗೌರೀಶ್ ವರ್ಣೆಕರ್, ಆರ್.ಎಸ್. ಭಾಸ್ಕರ್ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕ ರೇಮಂಡ್ ಡಿಕುನ್ನಾ ಸ್ವಾಗತಿಸಿದರು. ಸಮಾರೋಪ ಸಮಾರಂಭದಲ್ಲಿ ಮಂಗಳೂರು ಧರ್ಮಪ್ರಾಂತದ ಸಾರ್ವಜನಿಕ ಸಂಪರ್ಕಾಧಿಕಾರಿ ರೋಯ್ ಕ್ಯಾಸ್ತಲಿನೊ, ಫೋರ್ ವಿಂಡ್ಸ್ ನಿರ್ದೇಶಕ ಏಲಿಯಾಸ್ ಫೆರ್ನಾಂಡೀಸ್ ಉಪಸ್ಥಿತರಿದ್ದರು.ಮಂಗಳೂರು, ಗೋವಾ, ಕೇರಳ ಹಾಗೂ ಮಹಾರಾಷ್ಟ್ರ ಮುಂತಾದೆಡಗಳಿಂದ ಪ್ರತಿನಿಧಿಗಳು ಭಾಗವಹಿಸಿದ್ದರು.

Photo : ವೀಕ್ಷಿಸಿ

 

9. ಕೊಂಕಣಿ ವೈಭವ - ಕೊಂಕಣಿ ಮಾನ್ಯತಾ ದಿನಾಚರಣೆ

ಕೊಂಕಣಿ ಭಾಷಾ ಮಂಡಳ ಮಂಗಳೂರು ಇವರು ದಿನಾಂಕ 27.08.2022 ರಂದು ಮಂಗಳೂರಿನ ಡಾನ್‌ಬಾಸ್ಕೊ ಸಭಾಂಗಣದಲ್ಲಿ ನಡೆಸಿದ ಕೊಂಕಣಿ ಮಾನ್ಯತಾ ದಿನಾಚರಣೆ ಕಾರ್ಯಕ್ರಮದಲ್ಲಿ ಕೊಂಕಣಿ ಕಲಾ ಪ್ರದರ್ಶನ ನಡೆಯಿತು.

Photo : ವೀಕ್ಷಿಸಿ

 

10. ಕೊಂಕಣಿ ಲೋಕೋತ್ಸವ – 2022

ದಿನಾಂಕ 28.08.2022 ರಂದು ಶ್ರೀ ವಿದ್ಯಾದಿರಾಜ ಕಲಾಕ್ಷೇತ್ರ, ರಾಯಪೇಟೆ, ಶಿರಸಿಯಲ್ಲಿ ಕೊಂಕಣಿ ಲೋಕೋತ್ಸವ-2022 ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಶಿರಸಿ ನಗರ ಸಭಾಧ್ಯಕ್ಷರಾದ ‍ಶ್ರೀ ಗಣಪತಿ ನಾಯ್ಕ್‌ ಮಾತನಾಡಿ ಕೊಂಕಣಿ ಭಾಷಿಕಗರು ಭಾರತದ ಅಭಿವೃದ್ದಿಗೆ ಅಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ, ಅವರ ಕೊಡುಗೆಗಳನ್ನು ಗೌರವಿಸುವುದ ನಮ್ಮ ಕರ್ತವ್ಯ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅಧ್ಯಕ್ಷರಾದ ಡಾ ಕೆ ಜಗದೀಶ್‌ ಪೈ ಮಾತನಾಡಿ ಜಾಗತೀಕರಣದ ರಭಸಕ್ಕೆ ಬಾಷೆ ಬದಲಾಗಬಾರದು, ಕೊಂಕಣಿ ಭಾಷೆಯ ಮೂಲ ಸ್ವರೂಪ ಹಾಗೆ ಉಳಿಯುವಂತಹ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕೆಂದು ತಿಳಿಸಿದರು. ನಗರ ಸಭಾ ಅಧ್ಯಕ್ಷೆ ಶ್ರೀಮತಿ ವೀಣಾ ಶೆಟ್ಟಿ, ಜಿಲ್ಲಾ ದೈವಜ್ಞ ವಾಹಿನಿಯ ಅಧ್ಯಕ್ಷರಾದ ಶ್ರೀ ಸುಧಾಕರ್‌ ರಾಯ್ಕರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.  ಸಿದ್ದಿ ಪುಗಡಿ ನಾಚ್‌, ದಮಾಮಿ ನಾಚ್‌, ಗೌಳಿ ಸಿಗ್ಮೊ ನಾಚ್‌, ಕುಂಬ್ರಿ ಸಿಗ್ಮೊ ನಾಚ್‌, ಜಿಎಸ್ ಬಿ ಮಹಿಳಾ ಕಲಾ ವೈಭವ, ದೈವಜ್ಞ ಬ್ರಾಹ್ಮಣ ಲೋಕಕಲಾ ಪ್ರದರ್ಶನ, ಬಾವ‍ಳ್ಯಾ ಖೇಳ, ಬೇಡಾಲೆ ವೇಷ ಕಾರ್ಯಕ್ರಮ ಪ್ರದರ್ಶನಗೊಂಡಿತು. ಕೊಂಕಣಿ ಕಲಾಮಂಡಳದ ಅಧ್ಯಕ್ಷರಾದ ಶ್ರೀ ವಾಸುದೇವ ಶಾನಭಾಗ ಕಾರ್ಯಕ್ರಮ ನಿರೂಪಿಸಿ ಸ್ವಾಗತ ಗೈದರು. ಸದಸ್ಯ ಸಂಚಾಲಕರಾದ  ಡಾ ವಸಂತ ಬಾಂದೇಕರ್‌ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಸದಸ್ಯರಾದ ಶ್ರೀ ಸುರೇಂದ್ರ ಪಾಲನಕರ್‌ ವಂದನಾರ್ಪಣೆಗೈದರು.

Photo : ವೀಕ್ಷಿಸಿ

 

11. ಗೌರವ ಪ್ರಶಸ್ತಿ - 2022

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ 2022 ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ದಿನಾಂಕ 18.09.2022 ರಂದು ಬೆಂಗಳೂರಿನ ಕಾಶೀಮಠದಲ್ಲಿ ನಡೆಯಿತು. ಕೊಂಕಣಿ ಸಾಹಿತ್ಯ ವಿಭಾಗಲ್ಲಿ ಶ್ರೀ ಎಚ್‌ ಎಂ ಪೆರ್ನಾಲ್‌, ಕೊಂಕಣಿ ಕಲಾ ವಿಭಾಗದಲ್ಲಿ ಶ್ರೀ ರಮೇಶ್‌ ಕಾಮತ್‌ ಹಾಗೂ ಕೊಂಕಣಿ ಜಾನಪದ ವಿಭಾಗಲ್ಲಿ ‍ಶ್ರೀಮತಿ ಕುಮುದಾ ಗಡಕರ್‌ ಇವರಿಗೆ 2022 ನೇ ಸಾಲಿನ ಗೌರವ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಉನ್ನತ ಶಿಕ್ಷಣ ಸಚಿವರಾದ ಡಾ ಸಿ ಎನ್‌ ಅಶ್ವತ್ಥನಾರಾಯಣ ರವರು ಈ ಪ್ರಶಸ್ತಿ ಪ್ರದಾನ ಮಾಡಿ ನಮ್ಮ ಸಂಸ್ಕತಿ, ನಮ್ಮ ಭಾಷೆ, ಆಚಾರ ವಿಚಾರಗಳನ್ನು ಉಲಿಸಿಕೊಳ್ಳುವುದು ದೊಡ್ಡ ಸವಾಲಾಗಿದೆ. ಜಾಗತೀಕರಣದ ಬಳಿಕ ಇಂಗ್ಲಿಷ್‌ ಭಾಷೆ ನಮ್ಮೆಲ್ಲರನ್ನು ಆಕ್ರಮಿಸಿಕೊಂಡಿದೆ. ನಾವು ಮಾತೃ ಭಾಷೆಯಲ್ಲಿ ಹಿಡಿತ ಸಾಧಿಸಿದರೆ ಎಲ್ಲ ಭಾಷೆಗಳನ್ನು ಕೆಲಿಯಬಹುದು ಎಂದು ವೈಜ್ಞಾನಿಕವಾಗಿ ಧೃಡಪಟ್ಟಿದೆ. ಎಷ್ಟೇ ದೊಡ್ಡ ಹುದ್ದೆಗೇರಿದರೂ ಅಂತಿಮವಾಗಿ ನಮ್ಮ ಸಂಸ್ಕೃತಿ, ಆಚಾರ ವಿಚಾರ ಆಧಾರಿತವಾಗಿ ನಮ್ಮನ್ನು ಗುರುತಿಸುತ್ತಾರೆ ಎಂದು ತಿಳಿಸಿದರು. ಸಂಸದರಾದ ಡಿ. ವಿ ಸದಾನಂದ ಗೌಡ ಮಾತನಾಡಿ ಸಂಸ್ಕೃತಿ, ಸಂಪ್ರದಾಯ, ಸಂಸ್ಕಾರ, ಜೀವನ ಪದ್ದತಿ ಸಮಾಜದ ಆಧಾರ ಸ್ತಂಭಗಳು, ಈ ಪೈಕಿ ಒಂದರಲ್ಲಿ ಕೊರತೆಯಾದರೂ ಸಮಾಜ ಅಧಃಪತನ ಆಗುತ್ತದೆ. ನಮ್ಮ ದೇಶದಲ್ಲಿದ್ದ 2800 ಭಾಷೆಗಳ ಪೈಕಿ ಒಂದೂವರೆ ಸಾವಿರ ಭಾಷೆಗಳು ಕಣ್ಮರೆಯಾಗಿವೆ ಎಂದು ಹೇಳಿದರು. ವಿಧಾನ ಪರಿಷತ್‌ ಸದಸ್ಯರಾದ ಪ್ರತಾಪ್‌ ಸಿಂಹ ನಾಯಕ್‌, ಅಕಾಡೆಮಿಯ ಅಧ್ಯಕ್ಷರಾದ ಡಾ ಕೆ ಜಗದೀಶ್‌ ಪೈ, ಉಧ್ಯಮಿ ಹಾಗೂ ಶಿಕ್ಷಣ ತಜ್ಞ ಡಾ ಪಿ ದಯಾನಂದ ಪೈ, ಕೊಂಕಣಿ ಸಾಹಿತಿ ಶ್ರೀಮತಿ ಜಯಶ್ರೀ ಶಾನಭಾಗ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿವಿದ ಕಲಾ ತಂಡಗಳಿಂದ ಕಲಾ ಪ್ರದರ್ಶನ ನಡೆಯಿತು.

Photo : ವೀಕ್ಷಿಸಿ  ವೀಕ್ಷಿಸಿ

12. ಕೊಂಕಣಿ ನಾಟಕೋತ್ಸವ 2022

ಕೊಂಕಣಿ ರಂಗಭೂಮಿ/ ಕೊಂಕಣಿ ನಾಟಕ ಕ್ಷೇತ್ರಕ್ಕೆ ವಿಶೇಷ ಒತ್ತು ನೀಡುವ ನಿಟ್ಟಿನಲ್ಲಿ ದಿನಾಂಕ 26.09.2022 ರಿಂದ ದಿನಾಂಕ 01.10.2022 ರ ವರೆಗೆ ಮಂಗಳೂರಿನ ಡಾನ್‌ಬೋಸ್ಕೊ ಸಭಾಂಗಣದಲ್ಲಿ ಆರು ದಿನಗಳ ಕಾಲ " ಕೊಂಕಣಿ ನಾಟಕೋತ್ಸವ" ವು ವೈಭವಯುತವಾಗಿ ನಡೆಯಿತು. ಮಂಗಳೂರು ಕೆಥೋಲಿಕ್‌ ಕೊ.ಆ ಬ್ಯಾಂಕ್‌ ನ ಅಧ್ಯಕ್ಷರಾದ ಅನಿಲ್‌ ಲೋಬೊ ರವರು ಗುಮಟೆ ಬಾರಿಸುವ ಮೂಲಕ ನಾಟಕೋತ್ಸವನ್ನು ಉದ್ಘಾಟಿಸಿ ಶುಭಹಾರೈಸಿದರು. ಈ ನಾಟಕೋತ್ಸವದಲ್ಲಿ ಪ್ರದರ್ಶನಗೊಂಡ ನಾಟಕಗಳು

ಸೆಪ್ಟೆಂಬರ್ 26 - ಸೋಮವಾರ -  "ಸಳ್ಗಿ" ನಿನಾಸಂ ಕ್ರಿಸ್ಟೋಫರ್ ಅಸ್ತಿತ್ವ, ಮಂಗಳೂರು 
ಸೆಪ್ಟೆಂಬರ್ 27 - ಮಂಗಳ ವಾರ - "ಮೂರು ಮುತ್ತು" ರೂಪಕಲಾ ಕುಳ್ಳಪ್ಪು ತಂಡ, ಕುಂದಾಪುರ
ಸೆಪ್ಟೆಂಬರ್ 28 - ಬುಧವಾರ - "ಮುಕ್ಕಾಮ್‌ ಪೋಸ್ಟ್‌ ಆಫೀಸ್"‌, ಮಾಂಡ್‌ ಪಂಗಡ್‌, ಮಂಗಳೂರು
ಸೆಪ್ಟೆಂಬರ್ 29 - ಗುರುವಾರ - "ಘಟಾಳೊ", ಸಾಧನಾ ಬಳಗ, ಮಂಗಳೂರು
ಸೆಪ್ಟೆಂಬರ್ 30 - ಶುಕ್ರವಾರ -"ಆತ್ಮ ಲಿಂಗ" ಕೊಂಕಣಿ ಸಾಂಸ್ಕೃತಿಕ ಸಂಘ, ಮಂಗಳೂರು 
ಅಕ್ಟೋಬರ್ 1 - ಶನಿವಾರ - "ವಾಸಾಂಸಿ ಜೀರ್ಣಾನಿ"  ಭೂಮಿಗೀತ ಸಾಂಸೃತಿಕ ವೇದಿಕೆ, ಪಟ್ಲ 

ದಿನಾಂಕ 01.10.2022 ರಂದು ಈ ನಾಟಕೋತ್ಸವದ ಸಮಾರೋಪ ಸಮಾರಂಭ ನೆರವೇರಿತು. ಸಮಾರಂಭದಲ್ಲಿ ಅಕಾಡೆಮಿಯ ಅಧ್ಯಕ್ಷರಾದ ಡಾ ಕೆ ಜಗದೀಶ್‌ ಪೈ, ಸದಸ್ಯರಾದ ಶ್ರೀ ಕೆನ್ಯೂಟ್‌ ಜೀವನ್‌ ಪಿಂಟೊ, ಹಾಗೂ ಶ್ರೀ ಅರುಣ್‌ ಜಿ ಶೇಟ್‌ ಉಪಸ್ಥಿತರಿದ್ದರು.

Photo : ವೀಕ್ಷಿಸಿ

 

13. ಸಾಂಸ್ಕೃತಿಕ ಏಕತಾ ದಿನ

ಭಾಷೆಗಳನ್ನು ಉಳಿಸಿದರೆ ಮಾತ್ರ ಭಾರತೀಯ ರಾಷ್ಟ್ರೀಯ ಏಕತೆಯನ್ನು ಎಲ್ಲಾ ಮುಂದಿನ ಪೀಳಿಗೆಗೆ ಕೊಡಲು ಸಾಧ್ಯವಾದೀತು ಎಂದು ದಕ್ಷಿಣ ಕನ್ನಡ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಜೇಶ್ ಜಿ ಅವರು ಹೇಳಿದರು. ಅವರು ಕೊಂಕಣಿ, ತುಳು, ಬ್ಯಾರಿ, ಹವ್ಯಕ, ಹಿಂದಿ, ಕನ್ನಡ, ಭಾಷೆಗಳ ಬಹುಭಾಷಾ ಕವಿಗೋಷ್ಠಿಯನ್ನು ಐಕ್ಯತಾ ದಿನಾಚರಣೆಯ ಪ್ರಯುಕ್ತ ದಿನಾಂಕ 23.11.2022 ರಂದು ಕೊಂಕಣಿ ಮತ್ತು ಬ್ಯಾರಿ ಅಕಾಡೆಮಿಗಳ ಜಂಟಿ ಆಶ್ರಯದಲ್ಲಿ ಕೊಂಕಣಿ ಅಕಾಡೆಮಿ ಕಛೇರಿ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು. ಹಿರಿಯ ಹದಿನಾರು ಕವಿಗಳಾದ ಜೊಸ್ಸಿ ಪಿಂಟೊ ಕಿನ್ನಿಗೋಳಿ, ಅರವಿಂದ್ ಶಾನಭಾಗ, ಜೂಲಿಯೆಟ್ ಫರ್ನಾಂಡೀಸ್ ಮಂಗಳೂರು ಕೊಂಕಣಿಯಲ್ಲಿ, ಮಹಮ್ಮದ್‌ ಬಡ್ಡೂರು, ಅನುರಾಧಾ ರಾಜೀವ್, ರೇಮಂಡ್ ಡಿಕೂನಾ ತಾಕೊಡೆ ತುಳುವಿನಲ್ಲಿ, ಹಂಝಾ ಮಲಾರ್, ಎಡ್ವರ್ಡ್ ಲೋಬೊ ತೊಕ್ಕೊಟ್ಟು, ಸಿಹಾನ ಬಿ ಎಂ ಬ್ಯಾರಿ ಭಾಷೆಯಲ್ಲಿ, ಮಹೇಶ್‌ ಆರ್ ನಾಯಕ್, ಪೂರ್ಣಿಮಾ ಸುರೇಶ್ ನಾಯಕ್‌, ನವೀನ್ ಡಿಸೋಜ ಕನ್ನಡದಲ್ಲಿ, ಡಾ.ಸುರೇಶ ನೆಗಳಗುಳಿ, ಗುಣಾಜೆ ರಾಮಚಂದ್ರ ಭಟ್‌ ಹವ್ಯಕದಲ್ಲಿ, ಡಾ. ಪರಶುರಾಮ ಮಾಳಗೆ ಮತ್ತು ಅರುಣ್ ಜಿ ಶೇಟ್ ಹಿಂದಿಯಲ್ಲಿ ರಾಷ್ಟ್ರೀಯ ಐಕ್ಯತೆಯನ್ನು ಪ್ರೇರೇಪಿಸುವ ಪ್ರಬುದ್ಧ ಕವಿತೆಗಳನ್ನು ಸಾದರಪಡಿಸಿದರು. ರಾಷ್ಟ್ರೀಯ ಪ್ರಶಸ್ತಿ ವಿಜೇತೆ ಕು! ರಮೊನಾ ಇವಟ್ ಪಿರೇರಾ ಅವರು ನೃತ್ಯ ವೈಭವ ಪ್ರದರ್ಶನ ಮಾಡಿದರು. ಮಾಜಿ ಉಪಮೇಯರ್‌ ಬಶೀರ್ ಬೈಕಂಪಾಡಿ, ಮಾರ್ಸೆಲ್ ಡಿಸೋಜ, ಶಂಶೀರ್ ಬುಡೊಳಿ, ಸತ್ಯವತಿ ಕಾಮತ್, ಹ್ಯಾರೂನ್ ರಶೀದ್ ಮತ್ತು ಇತರರು ಉಪಸ್ಥಿತರಿದ್ದರು. ಕೊಂಕಣಿ ಹಾಗೂ ಬ್ಯಾರಿ ಸಾಹಿತ್ಯ ಅಕಾಡೆಮಿಯ ಸಿಬ್ಬಂದಿಗಳು ಕಾರ್ಯಕ್ರಮ ಸಂಯೋಜನೆಗೆ ಸಹಕಾರ ನೀಡಿದರು. ಅಕಾಡೆಮಿಯ ರಿಜಿಸ್ಟ್ರಾರ್ ಮನೋಹರ್ ಕಾಮತ್‌ ಸ್ವಾಗತಿಸಿ, ಹಿರಿಯ ಪತ್ರಕರ್ತ ಹಾಗೂ ಬಹುಭಾಷಾ ಕವಿ ರೇಮಂಡ್ ಡಿಕೂನ ತಾಕೊಡೆ ಕಾರ್ಯಕ್ರಮ ನಿರೂಪಿಸಿದರು.

14. ಕೊಂಕಣಿ ಸಾಂಪ್ರದಾಯಿಕ್‌ ಗಾನಾಂ

ದಿನಾಂಕ 12.01.2023 ರಂದು ಕೊಂಕಣಿ ಭಾಷೆಯ ವಿವಿಧ ಸಮುದಾಯಗಳ ಜಾನಪದ ಹಾಡುಗಳ "ಕೊಂಕಣಿ ಸಾಂಪ್ರದಾಯಿಕ್‌ ಗಾನಾಂ" ಕಾರ್ಯಕ್ರಮ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಕಚೇರಿಯಲ್ಲಿ ನಡೆಯಿತು. ‍ಖ್ಯಾತ ಕೊಂಕಣಿ ಸಾಹಿತಿ ಡಾ ಆಸ್ಟಿನ್‌ ಪ್ರಭು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕೊಡಿಯಾಲ ಖಬರ್‌ ಪತ್ರಿಕೆಯ ಸಂಪಾದಕರಾದ ಶ್ರೀ ವೆಂಕಟೇಶ್‌ ಬಾಳಿಗಾ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅಕಾಡೆಮಿಯ ರಿಜಿಸ್ಟ್ರಾರ್‌ ಆರ್.‌ ಮನೋಹರ್‌ ಕಾಮತ್‌ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೊಂಕಣಿ ಕ್ರಿಶ್ಷಿಯನ್‌ ಸಮುದಾಯದಿಂದ ಶ್ರೀಮತಿ ಐರಿನ್‌ ರೆಬೆಲ್ಲೊ, ಶ್ರೀಮತಿ ಮೀನಾ ಪಿಂಟೊ, ಜಿ.ಎಸ್.ಬಿ ಸಮುದಾಯದಿಂದ ಶ್ರೀಮತಿ ಚಂದ್ರಿಕಾ ಮಲ್ಯ, ಶ್ರೀಮತಿ ಮರೋಳಿ ಸಬಿತಾ ಕಾಮತ್‌, ದೈವಜ್ಞ ಸಮುದಾಯದಿಂದ ಶ್ರೀಮತಿ ಸುದಾ ನಾಗೇಶ್‌ ಶೇಟ್‌, ಕು | ಮೇಘ ಪೈ ಹಾಗೂ ಕುಡುಬಿ ಸಮುದಾಯದಿಂದ ‍ಶ್ರೀ ಜನಾರ್ಧನ ಗೌಡ ಮತ್ತು ನೇಮಿರಾಜ ಗೌಡ ತಮ್ಮ ತಮ್ಮ ಸಮುದಾಯದ ಸಾಂಪ್ರಾದಾಯಿಕ ಹಾಡುಗಳನ್ನು ಹಾಡಿದರು. ಶ್ರೀ ಕೆನ್ಯೂಟ್‌ ಜೀವನ್‌ ಪಿಂಟೊ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

15. ವೀರರಾಣಿ ಅಬ್ಬಕ್ಕ ಉತ್ಸವದಲ್ಲಿ ಕೊಂಕಣಿ ಸಾಂಸ್ಕೃತಿಕ ವೈಭವ 

ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ (ರಿ) ಇವರು ದಿನಾಂಕ 04.02.2023 ರಂದು ಉಳ್ಳಾಲದ ಮಹಾತ್ಮಗಾಂದಿ ರಂಗಮಂದಿರದಲ್ಲಿ 2022-23 ನೇ ಸಾಲಿನ ವೀರರಾಣಿ ಅಬ್ಬಕ್ಕ ಉತ್ಸವನ್ನು ಅಭೂತಪೂರ್ವಗಾಗಿ ಆಚರಿಸಿದರು. ಆಕರ್ಷಕ ತುಳುನಾಡ ಜಾನಪದ ದಿಬ್ಬಣಕ್ಕೆ ಸನ್ಮಾನ್ಯ ಶ್ರೀ ಡಾ ಸಿ ಸೋಮಶೇಖರ್‌, ಭಾ.ಆ.ಸೇ ಇವರು ಚಾಲನೆ ನೀಡುವ ಮೂಲಕ ಕಾರ್ಯಕ್ರಮವು ಪ್ರಾರಂಭವಾಯಿತು. ಬೆಳಿಗ್ಗೆ 9.00 ರಿಂದ ಸಂಜೆ 10.00 ರ ವರೆಗೆ ಕನ್ನಡ, ತುಳು, ಕೊಂಕಣಿ, ಬ್ಯಾರಿ ಭಾಷೆಗಳ ಸಾಂಸ್ಕೃತಿಕ, ಸಾಹಿತ್ಯಿಕ ವರ್ಣರಂಜಿತ ಕಾರ್ಯಕ್ರಮಗಳೊಂದಿಗೆ ಜರುಗಿದ ಉತ್ಸವದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ‍ಶ್ರೀ ಶೇಖರ ಗೌಡ ಮತ್ತು ತಂಡದವರಿಂದ ಕೊಂಕಣಿ ಜಾನಪದ ನೃತ್ಯ ಹಾಗೂ ಕು.ಮೇಘ ಪೈ ಇವರಿಂದ ಕೊಂಕಣಿ ಸುಗಮ ಸಂಗೀತ ಕಾರ್ಯಕ್ರಮ ಪ್ರದರ್ಶನಗೊಂಡಿತು.

Photo : ವೀಕ್ಷಿಸಿ

Last Updated: 23-02-2023 12:04 PM Updated By: Karnataka Konkani Sahitya Academy



Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Karnataka Konkani Sahitya Academy
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080